ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳಿಂದ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ತರ ಸಾಧನೆ

0

ಪುತ್ತೂರು: ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ವತಿಯಿಂದ ನಡೆಸಿರುವ 2025 ಅಂತಾರಾಷ್ಟ್ರೀಯ ಹಿಂದಿ ಒಲಿಂಪಿಯಾಡ್ ಪರೀಕ್ಷೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ.

3ನೇ ತರಗತಿಯ ಸೃಷ್ಟಿ ಆರ್ ( ರೋಹಿತಾಕ್ಷ ಬಿ.ಮತ್ತು ರಜಿತ ಡಿ.ವಿ ದಂಪತಿ ಪುತ್ರಿ ), ಅವನೀತಾ ಶೆಣೈ (ಡಾ.ವೆಂಕಟ್ ಕೃಷ್ಣ ಶೆಣೈ ಎಂ ಮತ್ತು ಡಾ.ಅಮೃತಾ ಶೆಣೈ ಎಂ ದಂಪತಿ ಪುತ್ರಿ ), ಶ್ರೀಮಾ ಯು. ಆರ್ (ಉಜ್ವಲ್ ಕುಮಾರ್ ಪ್ರಭು ಮತ್ತು ರಕ್ಷಾ ಎಸ್. ಆರ್ ದಂಪತಿ ಪುತ್ರಿ) ಅಂತಾರಾಷ್ಟ್ರೀಯ ಚಿನ್ನದ ಪದಕ, ರೂ.1000 ಮೌಲ್ಯದ ಗಿಫ್ಟ್ ವೋಚರ್ , ಅತ್ಯುತ್ತಮ ಪ್ರದರ್ಶನ ಪ್ರಮಾಣಪತ್ರವನ್ನು ಪಡೆದಿದ್ದಾರೆ.

ಆರ್ಯನ್ಶ್ ಬಿ. ( ಗಗನ್ ದೀಪ್ ಬಿ. ಮತ್ತು ಶರಣ್ಯಲಕ್ಷ್ಮಿ ಬಿ. ದಂಪತಿ ಪುತ್ರ )ಅಂತಾರಾಷ್ಟ್ರೀಯ ಕಂಚಿನ ಪದಕ , ರೂ.1000 ಗಿಫ್ಟ್ ವೋಚರ್ ಮತ್ತು ಅತ್ಯುತ್ತಮ ಪ್ರದರ್ಶನ ಪ್ರಮಾಣಪತ್ರವನ್ನು ಗಳಿಸಿರುತ್ತಾರೆ.

ಇವರಿಗೆ ಶಾಲಾ ಹಿಂದಿ ಶಿಕ್ಷಕಿ ಪ್ರಫುಲ್ಲ ತರಬೇತಿಯನ್ನು ನೀಡಿರುತ್ತಾರೆ ಮತ್ತು ಶಾಲಾ ಉಪಪ್ರಾಂಶುಪಾಲೆ ಶ್ರೀದೇವಿ ಕೆ.ಹೆಗಡೆ ಮೇಲ್ವಿಚಾರಕರಾಗಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here