ಕೋಡಿಂಬಾಳದಲ್ಲಿ ಆದಿಮೊಗೇರ್ಕಳ ದೈವಗಳ ಮತ್ತು ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ

0

ಪುತ್ತೂರು : ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಗಳ ಸೇವಾ ಟ್ರಸ್ಟ್ ರಾಮನಗರ, ಕೋಡಿಂಬಾಳ ಇದರ ಆಶ್ರಯದಲ್ಲಿ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಗಳ ಮತ್ತು ಸ್ವಾಮಿ ಕೊರಗಜ್ಜ ದೈವದ 102ನೇ ವರ್ಷದ ನೇಮೋತ್ಸವ ಫೆ. 28ರಿಂದ ಮಾ. 1ರ ತನಕ ಕೋಡಿಂಬಾಳ ಗ್ರಾಮದ ರಾಮನಗರದಲ್ಲಿ ನಡೆಯಿತು.

ಫೆ. 28ರಂದು ಬೆಳಿಗ್ಗೆ ಗಣಪತಿ ಹೋಮ, ರಾತ್ರಿ ಅನ್ನಸಂತರ್ಪಣೆ, ಮೊಗೇರ್ಕಳ ಗರಡಿ ಇಳಿಯುವುದು, ರಾತ್ರಿ ತನ್ನಿಮಾಣಿಗ ಗರಡಿ ಇಳಿಯುವುದು ಮತ್ತು ಮೊಗೇರ್ಕಳ ಹಾಲು ಕುಡಿಯುವುದು ನಡೆಯಿತು. ಮಾ. 1ರಂದು ಗಂಧ ಪ್ರಸಾದ ನಡೆದ ಬಳಿಕ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆದು, ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.


ಟ್ರಸ್ಟ್ ನ ಗೌರವಾಧ್ಯಕ್ಷರಾದ ಹರೀಶ್ ರಾಮನಗರ, ಅಧ್ಯಕ್ಷ ನೀಲಯ್ಯ ಓಂತ್ರಡ್ಕ, ಕಾರ್ಯದರ್ಶಿ ಮೋನಪ್ಪ ಗಾಣದಗುಂಡಿ, ಉಪಾಧ್ಯಕ್ಷ ದಿನೇಶ್ ಪಂಜಳ, ಜತೆ ಕಾರ್ಯದರ್ಶಿಯಾಗಿ ದಿವಾಕರ ದಾಸರಗುಡ್ಡೆ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಾ. 4ರಂದು ಕುರಿ ತಂಬಿಲ ನಡೆಯಿತು.

LEAVE A REPLY

Please enter your comment!
Please enter your name here