ಉದನೆ ಸಂತ ಅಂತೋನಿ ಪ್ರೌಢಶಾಲಾ ದ್ವಿತೀಯ ದರ್ಜೆ ಸಹಾಯಕ ರೇಗಪ್ಪ ಅವರಿಗೆ ’ಸೇವಾಭೂಷಣ’ ಪ್ರಶಸ್ತಿ

0

ನೆಲ್ಯಾಡಿ; ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಪುತ್ತೂರು, ಕಡಬ ತಾಲೂಕು ಘಟಕಗಳ ಆಶ್ರಯದಲ್ಲಿ ನೀಡುವ 2026ನೇ ಸಾಲಿನ ಸೇವಾಭೂಷಣ ಪ್ರಶಸ್ತಿಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಉದನೆ ಸಂತ ಅಂತೋನಿ ಪ್ರೌಢಶಾಲೆಯ ದ್ವಿತೀಯ ದರ್ಜೆ ಸಹಾಯಕ ರೇಗಪ್ಪ ಎಂ.ಆಯ್ಕೆಯಾಗಿದ್ದಾರೆ.

ಸೇವಾಭೂಷಣ ಪ್ರಶಸ್ತಿಗೆ ಪುತ್ತೂರು ಹಾಗೂ ಕಡಬ ತಾಲೂಕಿನಿಂದ ರೇಗಪ್ಪ ಅವರು ಮಾತ್ರ ಆಯ್ಕೆಯಾಗಿದ್ದಾರೆ. ರೇಗಪ್ಪ ಅವರು ಕಳೆದ 15 ವರ್ಷಗಳಿಂದ ಉದನೆ ಸಂತ ಅಂತೋನಿ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮೂಲಮನೆ ನಿವಾಸಿಯಾಗಿದ್ದಾರೆ. ಮಾ.15ರಂದು ಪುತ್ತೂರು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ. ಇವರಿಗೆ ಉದನೆ ಸಂತ ಅಂತೋನಿ ಪ್ರೌಢಶಾಲೆಯ ಸಂಚಾಲಕರು, ಸಹಸಂಚಾಲಕರು, ಮುಖ್ಯಶಿಕ್ಷಕರು, ಶಿಕ್ಷಕರು, ಸಿಬ್ಬಂದಿಗಳು, ಪೂರ್ವವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here