







ರಾಮಕುಂಜ: ನುಜೂಮುಲ್ ಇಸ್ಲಾಂ ಯಂಗ್ಮೆನ್ಸ್ ಎಸೋಸಿಯೇಶನ್ ಗಂಡಿಬಾಗಿಲು ಇದರ ವತಿಯಿಂದ ಬದ್ರ್ ದಿನಾಚರಣೆ ಮತ್ತು ಇದರ ಸಲುವಾಗಿ ರಮಳಾನ್ ಉಪವಾಸ ಬಿಡಿಸುವ ಇಫ್ತಾರ್ ಕೂಟ ಸಮಾರಂಭ ಮಾ.7ರಂದು ಜರಗಿತು.
ಬದ್ರ್ ದಿನಾಚರಣೆ ಸಲುವಾಗಿ ಕುತುಬಿಯ್ಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ರಜಾಕ್ ಸುಲ್ತಾನ್ ದಾರಿಮಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು. ಬಳಿಕ ಮಾತನಾಡಿ ಬದ್ರ್ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಸಮಾರಂಭದಲ್ಲಿ ಕುತುಬಿಯ್ಯಾ ಜುಮಾ ಮಸೀದಿಯ ಮುಅದ್ದಿಂ ಬಶೀರ್ ದಾರಿಮಿ, ಮಸೀದಿ ಅಧ್ಯಕ್ಷ ಎಸ್. ಅಬ್ದುಲ್ ರಹಿಮಾನ್, ಕಾರ್ಯದರ್ಶಿ ನಝೀರ್ ಪೂರಿಂಗ, ಕೋಶಾಧಿಕಾರಿ ಹಸೈನಾರ್ ಹಾಜಿ, ಪದಾಧಿಕಾರಿಗಳಾದ ಜಿ. ಮಹಮ್ಮದ್ ರಫೀಕ್, ಅಬ್ದುಲ್ ರಜಾಕ್ ಮರ್ವೇಲ್, ಆದಂ ಹಾಜಿ ಎಸ್., ನೂಜೂಮುಲ್ ಇಸ್ಲಾಂ ಯಂಗ್ಮೆನ್ಸ್ ಪದಾಧಿಕಾರಿಗಳಾದ ನಿಝಾರ್, ಪಿ. ಲತೀಫ್, ಝಿಯಾದ್, ಎಸ್.ಪಿ. ಖಲಂದರ್, ಇಸಾಕ್ ಬೊಲುಂಬುಡ, ಮಹಮ್ಮದ್ ಆಲಿ, ಶಾಕಿರ್, ಝಕರಿಯಾ ನೇರೆಂಕಿ, ಆಶಿಫ್, ನೌಫಲ್ ಮತ್ತಿತರರು ಉಪಸ್ಥಿತರಿದ್ದರು.











