ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಕಡಬ ತಾಲೂಕು: ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಸತೀಶ್ .ಕೆ. ಐತ್ತೂರು, ಕಾರ್ಯದರ್ಶಿ: ಮಿಥುನ್ ಸುಂದರ್

ಕಡಬ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ (ರಿ.) ಪುತ್ತೂರು ಇದರ ಕಾರ್ಯದರ್ಶಿ ಬಿ.ಟಿ. ಮಹೇಶ್‌ಚಂದ್ರ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಕಡಬ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸತೀಶ್ ಕೆ. ಐತ್ತೂರು ಅವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಅಜಿತ್ ಪಾಲೇರಿ, ರವಿ ಮಾಯಿಲ್ಗ ಹಾಗೂ ಗೀತಾ ಉಂಡಿಲ ಆಯ್ಕೆಯಾಗಿದ್ದಾರೆ.


ಕಾರ್ಯದರ್ಶಿಯಾಗಿ ಮಿಥುನ್ ಸುಂದರ್ ಪಲ್ಲತ್ತಡ್ಕ ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಲಕ್ಷ್ಮೀಶ್ ಬಂಗೇರ ಪೆಲತ್ತೊಡಿ, ಅಶ್ವಥ್ ಸಾಂತ್ಯ ಮತ್ತು ಕೃಷ್ಣಪ್ಪ ಅಮೈ ಅವರನ್ನು ಆಯ್ಕೆ ಮಾಡಲಾಗಿದೆ. ಕೋಶಾಧಿಕಾರಿಯಾಗಿ ಸಂತೋಷ್ ಕುಮಾರ್ ಮರಕ್ಕಡ ಆಯ್ಕೆಯಾಗಿದ್ದಾರೆ.


ಸಂಘದ ಸಮಿತಿ ಸದಸ್ಯರಾಗಿ ದಿನೇಶ್ ಕೇಪುಲು, ಉಮೇಶ್ ಪೂಜಾರಿ ಬಳ್ಪ, ವಸಂತ ಪೂಜಾರಿ ಬದಿಬಾಗಿಲು, ಅಭಿಲಾಷ್ ಪಿ.ಕೆ. ಕಲ್ಲುಗುಡ್ಡೆ, ಸಂತೋಷ್ ಗುಂಡ್ಯ, ಉಮೇಶ್ ಕಾರ್ಲಾಡಿ, ಬಾಲಕೃಷ್ಣ ಬಣಜಾಲು, ಡಾ. ರವಿ ಕಕ್ಕೇಪದವು ಹಾಗೂ ಬಾಲಕೃಷ್ಣ ನೂಜಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ವೇಳೆ ಗೌರವ ಸಲಹೆಗಾರರಾಗಿ ಜಿನ್ನಪ್ಪ ಸಾಲ್ಯಾನ್ ಕಡಬ ಮತ್ತು ವಿಜಯಕುಮಾರ್ ಸೊರಕೆ ಆಯ್ಕೆಯಾಗಿದ್ದಾರೆ.


ಸಲಹೆಗಾರರಾಗಿ ನಾರಾಯಣ ಪೂಜಾರಿ ಪಾಲಪ್ಪೆ, ಆನಂದ ಟೈಲರ್, ಉಷಾ ಅಂಚನ್, ಅಶೋಕ್ ಕೊಯಿಲ, ಲಿಂಗಪ್ಪ ಪೂಜಾರಿ ಕೇಪುಲು, ಶಶಿಧರನ್ ಕಟ್ಟತ್ತಡ್ಕ, ಕುಮಾರಿ ವಾಸುದೇವನ್, ಸಂತೋಷ್ ಮಾತ್ರಾಡಿ ಹಾಗೂ ಡಾ. ಸದಾನಂದ ಕುಂದರ್ ನೆಲ್ಯಾಡಿ ಅವರನ್ನು ಆಯ್ಕೆ ಮಾಡಲಾಗಿದೆ.ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಂಘದ ಕಾರ್ಯಕರ್ತರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here