ಹನುಮಗಿರಿ ಬ್ರಹ್ಮಕಲಶೋತ್ಸವ : ಶ್ರೀ ಕೋಟಿ ರಾಮತಾರಕ ಜಪದೀಕ್ಷಾ ಕಾರ್ಯಕ್ರಮ

0

ಪುತ್ತೂರು: ಹನುಮಗಿರಿ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ 2026ನೇ ಎಪ್ರಿಲ್‌ನಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆಯುತ್ತಿರುವ ಶ್ರೀ ಕೋಟಿ ರಾಮತಾರಕ ಜಪದೀಕ್ಷೆಯನ್ನು ವಿವಿಧ ಗ್ರಾಮ ಸಮಿತಿಯವರು ಪಡೆದುಕೊಂಡರು.

ಪಾಣಾಜೆ,ಬೆಟ್ಟಂಪಾಡಿ,ಒಳಮೊಗ್ರು,ಮುಂಡೂರು,ಆರ್ಯಾಪು,ಕೆದಿಲ,ನರಿಮೊಗರು,ಮಾಣಿಲ,ಬಜತ್ತೂರು,ಇಡ್ಕಿದು,ವಿಟ್ಲ ಪಟ್ಟಣ,ಕಾಣಿಯೂರು,ಕುರಿಯ ಗ್ರಾಮದ ಗ್ರಾಮ ಸಮಿತಿಯವರು ಶ್ರೀ ಕೋಟಿ ರಾಮತಾರಕ ಜಪದೀಕ್ಷೆಯನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ, ಶ್ರೀ ಕೋಟಿ ರಾಮ ತಾರಕ ಯಜ್ಞ ಸಂಚಾಲಕ ಸೀತಾರಾಮ ರೈ ಕೆದಂಬಾಡಿ ಗುತ್ತು, ಬ್ರಹ್ಮ ಕಲಾತೋತ್ಸವ ಸಮಿತಿಯ ಉಪಾಧ್ಯಕ್ಷ ಮತ್ತು ನಗರ ಗ್ರಾಮ ರಚನಾ ಸಮಿತಿಯ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಹುಷ ಭಟ್ ಪಳನೀರು ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ಅನ್ಯ ನನ್ಯ ಅಚ್ಯುತ ಮೂಡತ್ತಾಯ, ಧರ್ಮದರ್ಶಿಗಳಾದ ಶಿವರಾಂ ಪಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here