ಬೊಳುವಾರು ಕ್ಷೇತ್ರದಲ್ಲಿ `ವೀರವರ್ಮ ಕಾಳಗ’ ತಿಂಗಳ ಯಕ್ಷಗಾನ ತಾಳಮದ್ದಳೆ

0

ಪುತ್ತೂರು : ಬೊಳುವಾರು ಶ್ರೀ ದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ದೇವಸ್ಥಾನದಲ್ಲಿ ಕ್ಷೇತ್ರದ ಯಕ್ಷ ಕಲಾ ಪ್ರತಿಷ್ಠಾನದ (ರಿ ) ವತಿಯಿಂದ ಮಾರ್ಚ್ ತಿಂಗಳ ತಾಳಮದ್ದಳೆ “ವೀರವರ್ಮ ಕಾಳಗ” ಪ್ರಸಂಗವು ಮಾ. 8ರಂದು ಅಪರಾಹ್ನ 2:30 ರಿಂದ ಸಂಜೆ 6:30ರ ವರೆಗೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಗೋವಿಂದ ನಾಯಕ್ ಪಾಲೆಚ್ಚಾರು, ಶ್ರೀಪತಿ ನಾಯಕ್ ಅಜೇರು, ರಾಜಗೋಪಾಲ ಜೋಶಿ ಚೆಂಡೆ ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಪ್ರಚೇತ್ ಆಳ್ವ, ಶ್ರೀಪತಿ ಭಟ್ ಉಪ್ಪಿನಂಗಡಿ, ಅಧ್ವೈತ್ ಕೃಷ್ಣ, ರಿಷಭ್ ರಾಮ್, ಧ್ರುವ ಮತ್ತು ಇತರ ಪ್ರತಿಷ್ಠಾನದ ವಿದ್ಯಾರ್ಥಿಗಳು ಸಹಕರಿಸಿದರು.

ಅರ್ಥಧಾರಿಗಳಾಗಿ ಶ್ರೀಯುತರಾದ ಗುಂಡ್ಯಡ್ಕ ಈಶ್ವರ ಭಟ್, ರಾಧಾಕೃಷ್ಣ ಕಲ್ಚಾರ್, ಗುಡ್ಡಪ್ಪ ಬಲ್ಯ, ಕೇಶವ ಭಟ್ ಕೇಕಣಾಜೆ, ಜಗನ್ನಾಥ ಪುಣಚ, ಪ್ರಚೇತ್ ಆಳ್ವ, ವಿದ್ಯಾಧರ ಪಟ್ಟೆ, ಅಭಯ್ ಕೃಷ್ಣ ಪಾಲ್ಗೊಂಡು ಕೂಟವನ್ನು ಯಶಸ್ವಿಗೊಳಿಸಿದರು. ಕಳೆದ ಐದು ವರ್ಷಗಳಿಂದ ಮಹಾಭಾರತ ಪುರಾಣದಿಂದ ಆಯ್ದ ಪ್ರಸಂಗಗಳು ನಿರಂತರವಾಗಿ ನಡೆದುಕೊಂಡು ಬಂದ ಬಗ್ಗೆ ಸಂಘದ ಉಪಾಧ್ಯಕ್ಷರು ಹಾಗೂ ತಾಳಮದ್ದಳೆ ಕಾರ್ಯಕ್ರಮದ ಮಾರ್ಗದರ್ಶಕರಾದ ಗುಂಡ್ಯಡ್ಕ ಈಶ್ವರ ಭಟ್ ಸಭೆಗೆ ವಿವರವಾದ ಮಾಹಿತಿ ನೀಡಿದರು.

ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶಂಕರ ಭಟ್ ಧನ್ಯವಾದ ಸಲ್ಲಿಸಿದರು. ಸಂಘದ ಸದಸ್ಯ ರಾಮ ಕೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ತಿಂಗಳ ತಾಳಮದ್ದಳೆಯ ಪ್ರಾಯೋಜಕತ್ವವನ್ನು ವಹಿಸಿದ ವಿದ್ಯಾಧರ ಪಟ್ಟೆ ಯವರಿಗೆ ಕ್ಷೇತ್ರದ ಪ್ರಸಾದದೊಂದಿಗೆ ಶಾಲು ಹಾಕಿ ಅಭಿನಂದನೆಯನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here