






ಕಡಬ: ಕಡಬ ತಾಲೂಕು ಕೊಯಿಲ ಗ್ರಾಮದ ಗೋಳಿತ್ತಡಿ –ಏಣಿತ್ತಡ್ಕ ರಸ್ತೆಯ ನೆಲೋಟ್ಟು ಎಂಬಲ್ಲಿರುವ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ವಾರ್ಷಿಕ ತಂಬಿಲ ಸೇವೆ ಮಂಗಳವಾರ ನಡೆಯಿತು.






ಕೃಷ್ಣಪ್ಪ ಪೂಜಾರಿ ಕಲ್ಕಾಡಿ ಪಟ್ಟೆ ತಂಬಿಲ ವಿಧಿ ವಿಧಾನ ನೆರವೇರಿಸಿದರು. ದೀಕ್ಷಿತ್ ನೀಡೇಲು ಮದ್ಯಸ್ಥರಾಗಿ ಕಾರ್ಯನಿರ್ವಹಿಸಿದರು.
ಸೇವಾ ಸಮಿತಿ ಗೌರವಾಧ್ಯಕ್ಷ ಯತೀಶ್ ಬಾನಡ್ಕ, ಅಧ್ಯಕ್ಷ ರವಿ ಸಂಕೇಶ, ಕಾರ್ಯದರ್ಶಿ ಸೀತಾರಾಮ ಸೀಗೆತ್ತಡಿ, ವಸಂತಿ ಕಲ್ಕಾಡಿ, ಉಪಾಧ್ಯಕ್ಷ ಗೋಪಾಲ ಅಂಬಾ, ಆಶೋಕ್ ಅಂಬಾ, ಸದಸ್ಯರಾದ ಬಾಲಕೃಷ್ಣ, ಸತೀಶ್ ಪೂಜಾರಿ, ಸಂಜೀವ ಮಾರಂಗ ಮೊದಲಾದವರು ಇದ್ದರು. ವಿವಿಧ ಗಣ್ಯರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.










