ಮಾ.11(ನಾಳೆ): ಸುಬ್ರಹ್ಮಣ್ಯದಲ್ಲಿ ನೂತನ ಆಡಳಿತದೊಂದಿಗೆ ಹೋಟೆಲ್ ಕುಕ್ಕೆದ್ವಾರ ಉಪಹಾರ ಮತ್ತು ವಸತಿಗೃಹ ಶುಭಾರಂಭ

0

ಪುತ್ತೂರು: ಸುಬ್ರಹ್ಮಣ್ಯದ ಕುಮಾರಧಾರ ದ್ವಾರದ ಬಳಿ ಹೋಟೆಲ್ ಕುಕ್ಕೆ ದ್ವಾರ ಉಪಹಾರ ಮತ್ತು ವಸತಿಗೃಹ ನೂತನ ಆಡಳಿತದೊಂದಿಗೆ ಮಾ.11 ರಂದು (ನಾಳೆ) ಶುಭಾರಂಭಗೊಳ್ಳಲಿದೆ.

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನ ಶ್ರೀಗಳು ದೀಪ ಪ್ರಜ್ವಲನೆ‌ ಮಾಡಲಿದ್ದಾರೆ. ಶುಭಾರಂಭದ ಪ್ರಯುಕ್ತ ಗಣಪತಿ ಹೋಮ, ಆಶ್ಲೇಷ ಬಲಿ ಪೂಜೆ, ಸರ್ಪ ಸಂಸ್ಕಾರ ಪೂಜೆ, ಸುದರ್ಶನ ಹೋಮ ಮತ್ತಿತರ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ನೂತನ ವಸತಿ ಗೃಹದಲ್ಲಿ ಸುಸಜ್ಜಿತ ವ್ಯವಸ್ಥೆಗಳಿದ್ದು ಡಿಲಕ್ಸ್, ಎಸಿ & ನಾನ್ ಎಸಿ ಕೊಠಡಿಗಳು, ಫ್ಯಾಮಿಲಿ ಕೊಠಡಿಗಳು, ಉಚಿತ ವೈ-ಫೈ ವ್ಯವಸ್ಥೆ, 24 ಗಂಟೆಗಳ ಬಿಸಿ ನೀರು, ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇದ್ದು, ಹೋಟೆಲ್ ನಲ್ಲಿ ಶುದ್ಧ ಸಸ್ಯಹಾರಿ ಉಪಹಾರದ ವ್ಯವಸ್ಥೆಗಳು ಇರುವುದಾಗಿ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here