






ಪುತ್ತೂರು : ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೂತ್ ವಾಲಿಬಾಲ್ ಚಾಂಪಿಯನ್ ಶಿಪ್ ಪಂದ್ಯಾಟವು ಮಾರ್ಚ್ ತಿಂಗಳನಲ್ಲಿ ನಡೆಯಲಿದ್ದು,26 ರ ವಿಭಾಗದ ಯೂತ್ ನ್ಯಾಷನಲ್ ಕರ್ನಾಟಕ ರಾಜ್ಯ ತಂಡದಲ್ಲಿ ಪಂಜದ ಚಿನ್ಮಯ ಎಸ್.ಆಳ್ವ ಆಯ್ಕೆಯಾಗಿರುತ್ತಾರೆ.


ಇವರು ಶಿವಪ್ರಸಾದ್ ಆಳ್ವ ಮತ್ತು ಶ್ರೀಮತಿ ಶಶಿಕಲಾ ಎಸ್ ಆಳ್ವ ದಂಪತಿಯವರ ಪುತ್ರ .ಪ್ರಸ್ತುತ ಎಸ್ ಆರ್ ಎಂ ಯುನಿವರ್ಸಿಟಿಯಲ್ಲಿ ಪ್ರಥಮ ಬಿ.ಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.













