






ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರು ವ್ಯಕ್ತಿಗಳಿಗೆ ಒಟ್ಟು 5 ಲಕ್ಷ ರೂ.ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ಬಿಡುಗಡೆಯಾಗಿದೆ.
ಪುತ್ತೂರು ಶಾಸಕ ಅಶೋಕ್ ರೈ ಅವರ ಶಿಫಾರಸ್ಸಿನಂತೆ ಪೆರುವಾಯಿ ಗ್ರಾಮದ ಕೆಳಗಿನ ಮನೆ ನಿವಾಸಿ ವಾರಿಜಾರವರಿಗೆ ರೂ.2 ಲಕ್ಷ ಹಾಗೂ ಸರ್ವೆ ಗ್ರಾಮದ ಮಹಮ್ಮದ್ ಅಮೀನ್ ರವರಿಗೆ 3 ಲಕ್ಷ ರೂ.ಪರಿಹಾರ ಧನ ಮಂಜೂರಾಗಿದೆ. ಪರಿಹಾರ ಮೊತ್ತ ಫಲಾನುಭವಿಗಳ ಖಾತೆಗೆ ನೇರ ಜಮಾವಣೆಯಾಗಲಿದೆ.














