






ಪುತ್ತೂರು: ಸವಣೂರು ಸಮೀಪದ ಮುಕ್ಕೂರು ಕುಂಡಡ್ಕ ನೇಸರ ಯುವಕ ಮಂಡಲವು ದಶಪ್ರಣತಿ ಪ್ರಯುಕ್ತ ಊರವರ ಸಹಕಾರದಿಂದ ಕುಂಡಡ್ಕದ ಹೊನ್ನಮ್ಮ ಅವರಿಗೆ ನಿರ್ಮಿಸಿದ ನೇಸರ ನಿಲಯಕ್ಕೆ ವಿದ್ಯುತ್ ಸಂಪರ್ಕ ಒದಗಿಸಲಾಗಿದ್ದು ಮಾ.10ರಂದು ಹಸ್ತಾಂತರ ಕಾರ್ಯಕ್ರಮ ನಡೆಯಿತು.


ನೇಸರ ದಶಪ್ರಣತಿ ಸಮಿತಿ ಸಂಚಾಲಕ ಕುಂಬ್ರ ದಯಾಕರ ಆಳ್ವ ನೇಸರ ಬೆಳಕು ಹಸ್ತಾಂತರಿಸಿ ಮಾತನಾಡಿ, ನೇಸರ ಯುವಕ ಮಂಡಲದ ದಶಪ್ರಣತಿಯು ಸರ್ವ ಕಾಲಕ್ಕೂ ಶಾಶ್ವತವಾಗಿರಲು ಅಶಕ್ತ ಕುಟುಂಬಕ್ಕೆ ನಿರ್ಮಿಸಿದ ಮನೆ ಸಾಕ್ಷಿಯಾಗಿ ನಿಲ್ಲಲಿದೆ. ಇದೀಗ ದಾಖಲಾತಿ ಸಮಸ್ಯೆ ಪರಿಹರಿಸಿಕೊಂಡು ನೇಸರ ಯುವಕ ಮಂಡಲವು ದಾನಿಗಳ ಸಹಕಾರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ ಉತ್ತಮ ಕಾರ್ಯ ಮಾಡಿದೆ ಎಂದರು. ನೇಸರ ದಶಪ್ರಣತಿ ಸಮಿತಿ ಸದಸ್ಯ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಶುಭಹಾರೈಸಿದರು.




ಮೀಟರ್ ಅಳವಡಿಕೆ
ಮನೆ ಹಸ್ತಾಂತರ ಸಂದರ್ಭದಲ್ಲಿಯೇ ವಿದ್ಯುತ್ ಬೆಳಕು ಹರಿಸುವ ಪ್ರಯತ್ನ ನಡೆಸಿದ್ದರೂ ಆ ಕುಟುಂಬದಲ್ಲಿ ಸೂಕ್ತ ದಾಖಲೆ ಪತ್ರಗಳು ಇಲ್ಲದ ಕಾರಣ ತಕ್ಷಣಕ್ಕೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಕಳೆದ ಒಂದುವರೆ ತಿಂಗಳಿನಿಂದ ಕಾನೂನು ಬದ್ದವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ನೇಸರ ಯುವಕ ಮಂಡಲ, ನೇಸರ ದಶಪ್ರಣತಿ ಸಮಿತಿಯು ಹಲವರ ಸಹಕಾರದಿಂದ ಪ್ರಯತ್ನ ಮುಂದುವರಿಸಿದ ಪರಿಣಾಮ ಕೊನೆಗೂ ನೇಸರನ ಬೆಳಕು ಈ ಮನೆಯನ್ನು ಬೆಳಗಿದೆ.
ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಸದಸ್ಯರಾದ ಕುಸುಮಾಧರ ಪೂಜಾರಿ ಮುಕ್ಕೂರು, ಜಯಂತ ಗೌಡ ಕುಂಡಡ್ಕ, ರವಿ ಕುಂಡಡ್ಕ, ಪ್ರವೀಣ್ ಬೋಳಕುಮೇರು, ಪ್ರಶಾಂತ್ ರೈ ಬೋಳಕುಮೇರು ಉಪಸ್ಥಿತರಿದ್ದರು.










