







ಪುತ್ತೂರು: ಬೆಂಕಿ ಆಕಸ್ಮಿಕದಿಂದ ಅಂಗಡಿ ಬೆಂಕಿಗಾಹುತಿಯಾದ ಅಂಗಡಿ ಮಾಲಕಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ.5 ಲಕ್ಷ ಪರಿಹಾರ ಮಂಜೂರಾಗಿದೆ.
ವಿಟ್ಲ ಗ್ರಾಮದ ಮಂಕುಡೆಶಾಲಾ ಬಳಿ ಕುಡ್ತಮುಗೇರು ಕೊಳ್ನಾಡು ಸಂತೋಷ್ ಎಂಬವರ ಎಲೆಕ್ಟ್ರಿಕಲ್ ಬೆಂಕಿ ಅವಘದಿಂದ ಸುಮಾರು 80 ಲಕ್ಷ ರೂ.ನಷ್ಟ ಸಂಭವಿಸಿತ್ತು. ಪರಿಹಾರಕ್ಕಾಗಿ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದ್ದರು. ಶಾಸಕರ ಶಿಫಾರಸ್ಸಿನಂತೆ ಅಂಗಡಿ ಮಾಲಕಗೆ ರೂ.5 ಲಕ್ಷ ಪರಿಹಾರ ಮಂಜೂರಾಗಿದೆ.











