ಪುತ್ತೂರು ಜಾತ್ರೆಗೆ ಸೇವಾ ರೂಪದಲ್ಲಿ ಭಜನಾ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ಭಜನಾ ಕಾರ್ಯಕ್ರಮವನ್ನು ಉಚಿತವಾಗಿ ನೀಡುವವರು ಅರ್ಜಿ ಸಲ್ಲಿಸುವಂತೆ ದೇವಳದಿಂದ ಪ್ರಕಟಣೆ ನೀಡಲಾಗಿದೆ.


ಎ.10 ರಿಂದ 20ರ ತನಕ ಶ್ರೀ ದೇವರ ಜಾತ್ರೆಯ ಸಂದರ್ಭ ಬೆಳಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ಭಜನಾ ಕಾರ್ಯಕ್ರಮಗಳನ್ನು ಉಚಿತವಾಗಿ ಸೇವಾ ರೂಪದಲ್ಲಿ ನಡೆಸಲು ಇಚ್ಚಿಸುವವರು ಮಾ.25ರ ಒಳಗಾಗಿ ಅರ್ಜಿಯನ್ನು ದೇವಳದ ಕಚೇರಿಗೆ ನೀಡಬೇಕು. ಭಜನೆ ಸೇವೆ ಮಾಡುವವರು ತಾಳ, ಹಾಮೋರ್ನಿಯಂ, ತಬಲವನ್ನು ತಾವೇ ತರತಕ್ಕದು. ಅರ್ಜಿಯಲ್ಲಿ ಭಜನಾ ಮಂಡಳಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ತಂಡದಲ್ಲಿ ಭಾಗವಹಿಸುವ ಸದಸ್ಯರ ಸಂಖ್ಯೆಯನ್ನು ನಮೂದಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ: 9448153371 ಗೆ ಅನ್ನು ಸಂಪರ್ಕಿಸಬೇಕೆಂದು ದೇವಳದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here