






ಪುತ್ತೂರು: ಜನವರಿ 2026 ರಲ್ಲಿ ನಡೆದ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಮುಹಮ್ಮದ್ ರಿಯಾಜ್ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.


ಇವರು ಸಂಪ್ಯದ ನಿವಾಸಿ ಅಬೂಬಕ್ಕರ್ ಮತ್ತು ಸಾರಮ್ಮ ದಂಪತಿಗಳ ಪುತ್ರನಾಗಿದ್ದು, 2017ರ ಶೈಕ್ಷಣಿಕ ವರ್ಷದಲ್ಲಿ ಸಂತ ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು.ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಅಭಿನಂದನೆಯನ್ನು ಸಲ್ಲಿಸಿದರು. ಉಪನ್ಯಾಸಕರಾದ ಸಂಜಯ್ ಎಸ್, ರಾಹುಲ್, ಭರತ್. ಜಿ. ಪೈ ಹಾಗೂ ಗೀತಾ ಉಪಸ್ಥಿತರಿದ್ದರು.













