ಸಂಟ್ಯಾರ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೆ ಡಿಕ್ಕಿಯಾಗಿ ಪರಾರಿಯಾದ ಕಾರು- ಪೆರಿಗೇರಿಯಲ್ಲಿ ಕಾರನ್ನು ತಡೆಹಿಡಿದ ಯುವಕರು

0

ಪುತ್ತೂರು : ಸಂಟ್ಯಾರಿನಲ್ಲಿ ನಿಲ್ಲಿಸಿದ್ದ ಹಲವು ಬೈಕ್‌ಗಳಿಗೆ ಡಿಕ್ಕಿಯಾಗಿ ನಿಲ್ಲಿಸದೆ ಪರಾರಿಯಾದ ಕಾರನ್ನು ಬಡಗನ್ನೂರು ಸಮೀಪ ಪೆರಿಗೇರಿ ಎಂಬಲ್ಲಿ ಯುವಕರು ತಡೆಹಿಡಿದ ಘಟನೆ ಮಾ.12ರಂದು ಸಂಜೆ ನಡೆದಿದೆ.

ಪುತ್ತೂರಿನಿಂದ ತೆರಳುತ್ತಿದ್ದ ಸ್ವಿಫ್ಟ್ ಕಾರೊಂದು (ಕೆಎ04 ಎಮ್‌ಎಲ್ 4745) ಸಂಟ್ಯಾರ್‌ನಲ್ಲಿ ಬೈಕೊಂದಕ್ಕೆ ಡಿಕ್ಕಿಯಾಗಿ ನಿಯಂತ್ರಣ ತಪ್ಪಿ ಪಾಣಾಜೆ ರಸ್ತೆಯ ಕಡೆಗೆ ಹೋಗಿ ಸಂಟ್ಯಾರ್ ಜಂಕ್ಷನ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ 6 ಬೈಕ್‌ಗಳು ನಜ್ಜುಗುಜ್ಜಾಗಿದ್ದು ಕೆಲವು ಬೈಕ್‌ಗಳು ಚರಂಡಿಗೆ ಬಿದ್ದಿದೆ. ಡಿಕ್ಕಿ ಹೊಡೆದ ಕಾರು ಅತೀಯಾದ ವೇಗದಲ್ಲಿ ಅದೇ ರಸ್ತೆಯಲ್ಲಿ ಮುಂದಕ್ಕೆ ಸಾಗಿದೆ. ಕಾರನ್ನು ನಿಲ್ಲಿಸಲು ಸ್ಥಳೀಯರು ಪ್ರಯತ್ನಪಟ್ಟರೂ ನಿಲ್ಲಿಸದ ಚಾಲಕ ಮುಂದಕ್ಕೆ ಹೋಗಿದ್ದಾನೆ.

ಸಂಟ್ಯಾರ್‌ನಿಂದ ಚೆಲ್ಯಡ್ಕ ಉಪ್ಪಳಿಗೆ ಕೌಡಿಚ್ಚಾರ್ ಮೂಲಕ ಪಟ್ಟೆಗೆ ಹೋಗುತ್ತಿದ್ದ ಕಾರನ್ನು ಪೆರಿಗೇರಿ ಎಂಬಲ್ಲಿ ಯುವಕರು ತಡೆದು ನಿಲ್ಲಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here