ಕುಂಜೂರುಪಂಜ ಶಾಲಾ ಅಮೃತ ಮಹೋತ್ಸವ ಅಂಗವಾಗಿ ಜಾದು ಪ್ರದರ್ಶನ,ಪೋಷಕರ ಸಭೆ 

0

ಬಡಗನ್ನೂರು: ಕುಂಜೂರುಪಂಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಮಹೋತ್ಸವದ ಪ್ರಯುಕ್ತ ವಿಶೇಷ ಪ್ರತಿಭೆ ಕುಮಾರ್ ರೋಷನ್ ಶರೀಫ್ ಹಾಗೂ ಅವರ ಸಹೋದರ ಚಾಂದ್ ಶರೀಫ್ ರವರಿಂದ ಜಾದು ಪ್ರದರ್ಶನ ಮಾ.7ರಂದು ನಡೆಯಿತು.

ಪ್ರಾರಂಭದಲ್ಲಿ ಪೋಷಕರ ಸಭೆ ನಡೆಯಿತು. ಬಳಿಕ ಜಾದು ಪ್ರದರ್ಶನ ನಡೆಯಿತು. ವಿಶೇಷ ಅಗತ್ಯಯುಳ್ಳ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ನೀಡಿದ ಬಹುಮುಖ ಪ್ರತಿಭೆ ರೋಷನ್ ಶರೀಫ್ ರವರು ಹಾಗೂ ಅವರ ಸಹೋದರ ಚಾಂದ್ ಶರೀಫ್ ರವರು ತಮ್ಮಲ್ಲಿರುವ ಅದ್ಬುತ ಪ್ರತಿಭೆಯನ್ನು ಶಾಲಾ ಮಕ್ಕಳಿಗೆ 2 ಗಂಟೆಗಳ ಕಾಲ ಪ್ರದರ್ಶನ ನೀಡಿ ಸ್ಪೂರ್ತಿ ನೀಡಿದರು.

ಸಭೆಯಲ್ಲಿ ಎಸ್.ಡಿ.ಯಂ.ಸಿ ಅಧ್ಯಕ್ಷ ಶರೀಫ್ ಉಪಾಧ್ಯಕ್ಷೆ ಶುಭಲಕ್ಷ್ಮಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೂವಪ್ಪ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ,ಮಕ್ಕಳ ಪೋಷಕರು ಅಕ್ಷರದಾಸೋಹ ಸಿಬ್ಬಂದಿಗಳು ಮತ್ತು ಮಕ್ಕಳು ಭಾಗವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಬಿ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ಭಾರತಿ ವಂದಿಸಿದವರು ಶಿಕ್ಷಕ ವೃಂದದವರು. ಸಹಕರಿಸಿದವರು.

LEAVE A REPLY

Please enter your comment!
Please enter your name here