






ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪುತ್ತೂರು ಬೆಟ್ಟಂಪಾಡಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ವಠಾರದಲ್ಲಿ ಮರಗಳ ತೆರವು ಕಾರ್ಯಾಚರಣೆ ಮಾ.12 ರಂದು ನಡೆಯಿತು.


ಪ್ರೌಢಶಾಲಾ ಸುತ್ತ ಮುತ್ತ ಶಾಲೆಗೆ ಮತ್ತು ವಿದ್ಯುತ್ ಕಂಬಗಳಿಗೆ ಅಪಾಯಕಾರಿ ಸ್ಥಿತಿಯಲ್ಲಿ ಒಣಗಿ ನಿಂತ ಮರಗಳನ್ನು ತೆರವು ಗೊಳಿಸಲಾಯಿತು. ಸ್ವಯಂ ಸೇವಕರಾದ ಸುಬ್ರಹ್ಮಣ್ಯ, ಅಶೋಕ, ದಿನೇಶ, ಉಮೇಶ, ಸತೀಶ್ ಪದ್ಮಾವತಿ, ಗೀತಾ ಜನಾರ್ದನ ಪಾಲ್ಗೊಂಡರು.



ಶಾಲೆಯ ಮುಖ್ಯ ಗುರುಗಳಾದ ವಿಜಯಕುಮಾರ್ ತಮ್ಮ ಸೇವೆಯನ್ನು ಗುರುತಿಸಿ ಪ್ರಶಂಶಿಸಿ ಇನ್ನು ಮುಂದೆಯೂ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಹೇಳಿ ಶುಭ ಹಾರೈಸಿದರು. ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಸೋಹನ್. ಜಿ ಭೇಟಿ ನೀಡಿ ಶುಭ ಹಾರೈಸಿದರು.ಪ್ರೌಢಶಾಲಾ ಸಹಶಿಕ್ಷಕರು ಸಹಕರಿಸಿದರು.










