ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ವತಿಯಿಂದ ಪಿಎಂಶ್ರೀ ಶಾಲಾ ಶಿಕ್ಷಕರಿಗೆ ಬಲವರ್ಧನೆ ತರಬೇತಿ : ಅನುಭವಾತ್ಮಕ ಭೇಟಿ ಕಾರ್ಯಕ್ರಮ

0

ಪುತ್ತೂರು: ಪಿ.ಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲಕ್ಕೆ ದ.ಕ ಜಿಲ್ಲೆಯ 20 ಪಿಎಂಶ್ರೀ ಶಾಲೆಗಳ 65 ಮಂದಿ ಶಿಕ್ಷಕರು ಅನುಭವಾತ್ಮಕ ಭೇಟಿ ನೀಡಿದರು.

ಶಾಲೆಯ ಶೈಕ್ಷಣಿಕ ಪ್ರಗತಿ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೂಲಸೌಕರ್ಯಗಳನ್ನು ವೀಕ್ಷಿಸುವ ಮೂಲಕ ಮಕ್ಕಳಲ್ಲಿ ಹೊಸ ಉತ್ಸಾಹವನ್ನು ತುಂಬಿದರು. ಸಂಪನ್ಮೂಲ ವ್ಯಕ್ತಿ ವಿವೇಕಾನಂದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಪ್ರೊ.ಮಾಧವ ಭಟ್ ದೀಪ ಪ್ರಜ್ವಲಿಸಿದರು. ಡಯಟ್ ಹಿರಿಯ ಉಪನ್ಯಾಸಕ ಸುರೇಶ್ ಶಿಕ್ಷಣ ತಜ್ಞರನ್ನು ಗೌರವಿಸಿದರು. ಶಾಲಾ ಮುಖ್ಯಗುರು ತಾರಾನಾಥ ಪಿ ಸ್ವಾಗತಿಸಿದರು.

ಮಕ್ಕಳ ಶಾರೀರಿಕ ಚಟುವಟಿಕೆಗಳು, ಪ್ರಾರ್ಥನಾವಧಿಯ ಕಾರ್ಯಕ್ರಮಗಳು, ಬ್ಯಾಂಡ್ ಪ್ರದರ್ಶನ ,ಯೋಗ ಪ್ರದರ್ಶನ,ಕರಾಟೆ, ವಿಜ್ಞಾನ ಮತ್ತು ಗಣಿತ ಚಟುವಟಿಕೆಗಳು, ಮಕ್ಕಳ ಹಾಡುಗಳು,ಕರ್ನಾಟಕ ಸಂಗೀತ, ರಂಗಗೀತೆಗಳು, ಭರತನಾಟ್ಯ,ನಾಟಕ,ಯಕ್ಷಗಾನ ಶಾಲೆಯ ಸ್ವಚ್ಛ ಆವರಣ, ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ,ಕಂಪ್ಯೂಟರ್ ತರಗತಿಗಳು, ಶಾಲಾ ಪರಿಸರ, ಮಿಯಾವಾಕಿ ವನ ಹಾಗೂ ಶಾಲೆಯ 5-ಸ್ಟಾರ್ ಶ್ರೇಯಾಂಕದ ಕುರಿತು ವೀಕ್ಷಿಸಿ ಶ್ಲಾಘಿಸಿದರು.

​ತಜ್ಞರೊಂದಿಗೆ ಮಾತುಕತೆ
ಮಕ್ಕಳ ಬೌದ್ಧಿಕ ವಿಕಸನಕ್ಕಾಗಿ ಹಮ್ಮಿಕೊಂಡಿದ್ದ ‘ತಜ್ಞರೊಂದಿಗೆ ಮಾತುಕತೆ’ ಕಾರ್ಯಕ್ರಮದಲ್ಲಿ ಶಿಕ್ಷಕರು ಬಹಳ ಕುತೂಹಲದಿಂದ ಪಾಲ್ಗೊಂಡರು. ಶಿಕ್ಷಣದ 360 ಬಗ್ಗೆ ವಿಶ್ರಾಂತ ಪ್ರಾಚಾರ್ಯ ಮಾಧವ ಭಟ್ ಇವರ ಪ್ರೋತ್ಸಾಹದಾಯಕ ನುಡಿಗಳು ಶಿಕ್ಷಕರಲ್ಲಿ ಆತ್ಮಶಕ್ತಿಯನ್ನು ಜಾಗೃತಗೊಳಿಸಿತು. ಕಲೆ ಮತ್ತು ಕಲಿಕೆಯನ್ನು ಸಮತೋಲನದಲ್ಲಿ ಕೊಂಡೊಯ್ಯುತ್ತಿರುವ ಶಾಲೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
​

ಸಹಭೋಜನ
ಇಡೀ ದಿನ ನಮ್ಮೊಂದಿಗೆ ಕಲೆತು ಮಕ್ಕಳೊಂದಿಗೆ ಕುಳಿತು ತೃಪ್ತಿಕರವಾಗಿ ಭೋಜನವನ್ನು ಸ್ವೀಕರಿಸಿ, ಪ್ರೀತಿ ಹಂಚಿಕೊಂಡರು.
​

LEAVE A REPLY

Please enter your comment!
Please enter your name here