






ಪುತ್ತೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಪುತ್ತೂರು 5ನೇ ಹೆಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಸರಿತಾ ಡಿ ಅವರನ್ನು ಪುತ್ತೂರು ವಕೀಲರ ಸಂಘ ಮತ್ತು ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕೋರ್ಟ್ ಹಾಲ್‌ನಲ್ಲಿ ಗೌರವಿಸಲಾಯಿತು.



ಈ ಸಂದರ್ಭ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧಿಶರು ಮತ್ತು ಪುತ್ತೂರು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ನ್ಯಾಯಧೀಶೆ ಶ್ರೀಮತಿ ಪ್ರಕೃತಿ ಕಲ್ಯಾಣಪುರ, ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮತ್ತು ಜೆಎಮ್‌ಎಫ್‌ಸಿಯೂ ಆಗಿರುವ ದೇವರಾಜ್ ವೈ ಹೆಚ್, ಪ್ರಧಾನ ಸಿವಿಲ್ ನ್ಯಾಯಾಲಯ, ಜೆಎಮ್‌ಎಫ್‌ಸಿ ನ್ಯಾಯಾಧೀಶ ಶಿವಣ್ಣ ಹೆಚ್ ಆರ್, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ಜಿ, ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ, ಜೊತೆಕಾರ್ಯದರ್ಶಿ ಮಮತಾ ಸುವರ್ಣ, ಹಿರಿಯ ವಕೀಲರಾದ ನರಸಿಂಹಪ್ರಸಾದ್, ಅಶ್ರಫ್ ಅಗ್ನಾಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.












