ಬುರೂಜ್ ಶಾಲೆ: ಅಂತಾರಾಷ್ಟ್ರೀಯ ಇಂಗ್ಲೀಷ್ ಗ್ರಾಮರ್ ಪರೀಕ್ಷೆಯಲ್ಲಿ ರಾಷ್ಟ್ರೀಯ ರ್‍ಯಾಂಕ್

0

ರಝಾನಗರ: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಇಲ್ಲಿಯ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಇಂಗ್ಲೀಷ್ ಗ್ರಾಮರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದು ಕೊಂಡಿರುತ್ತಾರೆ.

ಮೈಕಲ್ ಪಿಂಟೋ ಮತ್ತು ವೆರೋನಿಕಾ ಡಿʼಸೋಜಾ ದಂಪತಿಯ ಪುತ್ರಿಯಾದ 6ನೇ ತರಗತಿಯ ಮೆಲಿಶಾ ಪಿಂಟೋ ರಾಷ್ಟ್ರೀಯ ಪ್ರಶಸ್ತಿ, ಕರುಣಾಕರ ಮತ್ತು ಸುಜಾತಾ ದಂಪತಿಯ ಪುತ್ರಿಯಾದ 6ನೇ ತರಗತಿಯ ತನ್ವಿಕಾ ರಾಜ್ಯ ಪ್ರಶಸ್ತಿ, ಮೊಹಮ್ಮದ್ ಯಾಸೀನ್ ಮತ್ತು ಫರ್ಹಾನ ದಂಪತಿಯ ಪುತ್ರಿಯಾದ 7 ನೇ ತರಗತಿಯ ಶಹನ ಶಂಶುನ್ ಹಾಗೂ ಪುತ್ರನಾದ 3 ನೇ ತರಗತಿಯ ಅಬುಸುಬ್ಹಾನ್ , ರಾಜೇಶ್ ಗೌಡ ಮತ್ತು ಮಮತಾ ಆರ್ ದಂಪತಿಯ ಪುತ್ರಿಯಾದ ಒಂದನೇ ತರಗತಿಯ ಚಿರಸ್ವಿ ಜಿಲ್ಲಾ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಒಟ್ಟು 44 ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪತ್ರ ತಮ್ಮದಾಗಿಸಿದ್ದಾರೆ.

LEAVE A REPLY

Please enter your comment!
Please enter your name here