ಮಾ. 22: ಪುತ್ತೂರು ತಾ| ಮಹಿಳಾ ಬಂಟರ ವಿಭಾಗದ ಸಾರಥ್ಯದಲ್ಲಿ ‘ಐಸಿರಿ 2026’ – ಮಹಿಳಾ ದಿನಾಚರಣೆ | ಸಾಧಕರಿಗೆ ಸನ್ಮಾನ | ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಮಾರ್ಗದರ್ಶನದೊಂದಿಗೆ ಮಹಿಳಾ ಬಂಟರ ವಿಭಾಗ, ಬಂಟರ ಸಂಘ ಪುತ್ತೂರು ತಾಲೂಕು ಇದರ ಸಾರಥ್ಯದಲ್ಲಿ ಯುವ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗ, ಬಂಟರ ಸಂಘ ಪುತ್ತೂರು ತಾಲೂಕು ಇವರ ಸಹಕಾರದೊಂದಿಗೆ ‘ಐಸಿರಿ 2026’ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾ. 22 ರಂದು ಪುತ್ತೂರು ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಲಿದೆ ಎಂದು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ತಿಳಿಸಿದ್ದಾರೆ. ಅವರು ಸುದ್ದಿಯೊಂದಿಗೆ ಮಾತನಾಡಿ, ಪೂರ್ವಾಹ್ನ ಗಂಟೆ 10.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕರಾದ ಭಾರತಿ ಶೆಟ್ಟಿ ನೆರವೇರಿಸಲಿದ್ದಾರೆ ಎಂದರು.


ಅಧ್ಯಕ್ಷತೆಯನ್ನು ಬಂಟರ ಸಂಘದ ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರು ವಹಿಸಲಿದ್ದಾರೆ. ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್‌ನ ಡಾ| ಆಶಾಜ್ಯೋತಿ ರೈರವರು ಸನ್ಮಾನ ಸಮಾರಂಭವನ್ನು ನಡೆಸಿಕೊಡಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಮಾಜಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಂಚಾಲಕ ದುರ್ಗಾಪ್ರಸಾದ್ ರೈ ಕುಂಬ್ರ, ಮಹಿಳಾ ಬಂಟರ ವಿಭಾಗದ ವಿಶೇಷ ಆಹ್ವಾನಿತರಾದ ಸುಮಾ ಅಶೋಕ್ ಕುಮಾರ್ ರೈರವರುಗಳು ಭಾಗವಹಿಸಲಿದ್ದಾರೆ. ಫಿಲೋಮಿನಾ ಸ್ವಾಯತ್ತ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ| ಭಾರತಿ ಎಸ್ ರೈಯವರು ಆಶಯ ಭಾಷಣ ಮಾಡಲಿದ್ದಾರೆ.
ಮಹಿಳಾ ಬಂಟರ ವಿಭಾಗ ಮಾಜಿ ಅಧ್ಯಕ್ಷರುಗಳಾದ ಕುಮುದಾ ಎಲ್.ಎನ್. ಶೆಟ್ಟಿ, ಮೀರಾ ಭಾಸ್ಕರ ರೈ, ನಿಕಟಪೂರ್ವ ಅಧ್ಯಕ್ಷೆ ಸಬಿತಾ ಭಂಡಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಯುವ ಬಂಟರ ವಿಭಾಗದ ಅಧ್ಯಕ್ಷ ಭಾಗ್ಯೇಶ್ ರೈ, ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳದಡ್ಡರವರು ಗೌರವ ಉಪಸ್ಥಿತರಿರುತ್ತಾರೆ ಎಂದು ಅಧ್ಯಕ್ಷೆ ಗೀತಾ ಮೋಹನ್ ರೈ ತಿಳಿಸಿದರು.ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ. ಶೆಟ್ಟಿ, ಕೋಶಾಧಿಕಾರಿ ಅರುಣಾ ಡಿ. ರೈರವರುಗಳು ಉಪಸ್ಥಿತರಿದ್ದರು.

ಕಾರ‍್ಯಕ್ರಮ ಈ ರೀತಿ ಇದೆ
ಪೂರ್ವಾಹ್ನ ಗಂಟೆ 9.೦೦ರಿಂದ :- ಪುತ್ತೂರು ಮಹಿಳಾ ಬಂಟರ ವಿಭಾಗದ ಐಸಿರಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಪೂರ್ವಾಹ್ನ ಗಂಟೆ 10.30ರಿಂದ ಸಭಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 1.30ರಿಂದ :- ಭೋಜನ ವಿರಾಮ, ಅಪರಾಹ್ನ ಗಂಟೆ 2.30ರಿಂದ :- ’ತುಳುನಾಡ ಐಸಿರಿ’ನೃತ್ಯ ರೂಪಕ ಮಹಿಳಾ ವಿಭಾಗದಿಂದ ಜರಗಲಿದೆ. ವಿನೋದ್‌ರಾಜ್ Xtreem Dance Crew B C Road ಇವರ ಮಾರ್ಗದರ್ಶನದಲ್ಲಿ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ ರೈ ಮತ್ತು . ವಿದುಷಿ ಸ್ವಸ್ತಿಕಾ ಆರ್ ಶೆಟ್ಟಿಯವರ ಶಿಷ್ಯವೃಂದದಿಂದ ನೃತ್ಯ ಸಿಂಚನ, ನಮ್ಮ ಟಿ.ವಿ. ಚಾನಲ್ ಪ್ರಸ್ತುತ ಪಡಿಸಿದ ಡ್ಯಾನ್ಸ್ ಮಮ್ಮಿ ಡ್ಯಾನ್ಸ್ ಸೀಸನ್ -8ರಲ್ಲಿ ಪ್ರಥಮ ಸ್ಥಾನ ಪಡೆದ ಸೌಪರ್ಣಿಕಾ ಗುರುರಾಜ್ ಇವರ ತಂಡದಿಂದ ನೃತ್ಯ ನಡೆಯಲಿದೆ. ತಾಲೂಕು ಬಂಟರ ಮಹಿಳಾ ವಿಭಾಗದ ಗೌರವಾಧ್ಯಕ್ಷೆಯಾಗಿ ಪುತ್ತೂರಿನ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌ರವರು ಕಾರ‍್ಯನಿರ್ವಹಿಸುತ್ತಿದ್ದು, ಐಸಿರಿ 2026 ಕಾರ‍್ಯಕ್ರಮದಲ್ಲಿ ಬಂಟ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ಕೋರಿದ್ದಾರೆ.


ಬಂಟ ಬಿರ್ಸೆದಿನಕ್ಲೆಗ್ ಸನ್ಮಾನ
ನಾಟಿವೈದ್ಯೆ ಮತ್ತು ಪ್ರಸೂತಿ ತe ಅಂತಕ್ಕೆ ಶೆಟ್ಟಿ ಕೇವಳಪಟ್ಟೆ ಕುಂತೂರು, ರ‍್ಯಾಂಕ್‌ನೊಂದಿಗೆ ಸಿವಿಲ್ ನ್ಯಾಯಾಽಶರಾಗಿ ಆಯ್ಕೆಯಾದ ದೀಪಿಕಾ ಎಸ್. ಶೆಟ್ಟಿ ಇಳಂತಾಜೆ, ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಗುರು ಹೆಚ್. ಶಾಂಭವಿ ಶೆಟ್ಟಿ, ನಾಡಿವೈದ್ಯ ಉಷಾ ಎಂ. ರೈ ಅಲಿಮಾರ, ದಿವ್ಯಾ ಕೆ ಶೆಟ್ಟಿ,Proprietor of Yamuna Borewells & Senoritas finesse unisex saloon Puttur ಹಾಗೂ ನೇಹಾ ರೈ, ಎಂ.ಕಾಂ.. ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತರು ಇವರುಗಳಿಗೆ ಸನ್ಮಾನ ಹಾಗೂ ಬಂಟ ಅಪ್ಪೆನಕುಲೆಗ್ ಐಸಿರದ ಮಾನಾದಿಗೆ ಹಾಗೂ ಸಮಾಜದ 80+ ವಯೋಮಾನದ ಹಿರಿಯ ಮಹಿಳೆಯರಿಗೆ ಗೌರವಾರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here