ಆತ್ಮ ನಿರ್ಭರ ಭಾರತ ಕರ್ನಾಟಕ ಸಾವಯವ ಕೃಷಿ ಯೋಜನೆ : ಕಾರ್ಯನಿರ್ವಹಣಾ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ 2026-27

0

ಪುತ್ತೂರು: ಆತ್ಮ ನಿರ್ಭರ ಭಾರತ ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ.) ಪುತ್ತೂರು ವಿಭಾಗ ವತಿಯಿಂದ ಕಾರ್ಯನಿರ್ವಹಣಾ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ 2026-27 ನಡೆಯಲಿದೆ.

ಜಿಲ್ಲಾ ಪಂಚಾಯತ್ ವ್ಯಾಪ್ತಿಯ 3 ಗ್ರಾಮ ಪಂಚಾಯತ್ ಪ್ರದೇಶಗಳಿಗೆ 1 ಕಾರ್ಯನಿರ್ವಹಣಾ ಅಧಿಕಾರಿಗಳನ್ನಾಗಿ ನೇರ ನೇಮಕಾತಿಗೊಳಿಸಲಾಗುವುದು. ಒಟ್ಟು 15 ಹುದ್ದೆಗಳಿಗೆ ನೇಮಕಾತಿ ಅವಕಾಶ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು 50ಕ್ಕೂ ಹೆಚ್ಚು ಕೃಷಿಕರಿಗೆ ಅತ್ಯುತ್ತಮ ಸಾವಯವ ಕೃಷಿ ಪ್ರೋತ್ಸಾಹ ಪ್ರಶಸ್ತಿ ನೀಡಿದ ಹಾಗೂ ಪ್ರತಿ ವರ್ಷ ನೀಡುತ್ತಿರುವ ಸಂಸ್ಥೆ ಇದಾಗಿದ್ದು, ನೂತನ ನೇಮಕಾತಿ ಅಧಿಕಾರಿಗಳು ರೈತರ ಗುರುತಿಸಿ ಆಯ್ಕೆ ಮಾಡಲಿದ್ದಾರೆ.

ಆಸಕ್ತ ಅಭ್ಯರ್ಥಿಗಳಿಗೆ ಅರ್ಹತೆಗಳು
ವಿವಾಹಿತ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮತ್ತು ಯುವಕರಿಗೆ ಅವಕಾಶ.
ವಿದ್ಯಾರ್ಹತೆ : ಎಸ್. ಎಸ್. ಎಲ್.ಸಿ, ಪಿ.ಯು.ಸಿ (ಯಾವುದೇ ಪದವಿ ಅವಶ್ಯಕತೆ ಇಲ್ಲ).
ವೇತನ ಶ್ರೇಣಿ : 25,000-32,000. ವಿಶೇಷ
ಆದ್ಯತೆ: ದ್ವಿಚಕ್ರ ಚಾಲನಾ ಸಾಮರ್ಥ್ಯ ಇರುವ ಗ್ರಾಮೀಣ ಪ್ರದೇಶದಲ್ಲಿ ಸಂಜೀವಿನಿ ಎಲ್.ಸಿ.ಆರ್.ಪಿ/ಎಂ.ಬಿ.ಕೆ. ಸ್ವ-ಸಹಾಯ ಸಂಘ ಸೇವಾ ಪ್ರತಿನಿಧಿ ಸೇವಾ ದೀಕ್ಷಿತೆ, ಪ್ರೇರಕಿ, ಇತ್ಯಾದಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿ ಮಹಿಳೆಯರಿಗೆ ವಿಶೇಷ ಗೌರವ ಅವಕಾಶ.

ಆಸಕ್ತ ಅಭ್ಯರ್ಥಿಗಳು ತಕ್ಷಣವೇ ತಮ್ಮ ಬಯೋಡಾಟ ಅರ್ಜಿಯನ್ನು 7022560060 ವಾಟ್ಸಾಪ್ ಸಂಖ್ಯೆಗೆ ಕೂಡಲೇ ಕಳುಹಿಸಿ ನೇಮಕಾತಿ ಅವಕಾಶ ಪಡೆದುಕೊಳ್ಳಿ ಬಯೋಡಾಟ ಅರ್ಜಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಯೋಜನೆಯ ವತಿಯಿಂದ ಬೆಳ್ತಂಗಡಿ ಹಾಗೂ ಯೋಜನೆ ಕಛೇರಿ ಬಿ.ಸಿ.ರೋಡ್ ಇಲ್ಲಿ ನೇರ ಸಂದರ್ಶನ. ಹಾಗೂ ಕೃಷಿ ಯೋಜನೆ ಸಂಬಂದಿತ ಲಿಖಿತ ಪರೀಕ್ಷೆ ಮಾಹಿತಿ ಕಾರ್ಯಗಾರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆರ್ಗಾನಿಕ್ ಫೌಂಡೇಶನ್ ಮಂಗಳೂರು 7022560060, 7338627102 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here