







ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.20ರಂದು ಸಂಜೆ ಗಂಟೆ 4.45ಕ್ಕೆ ಲಲಿತಾ ಸಹಸ್ರನಾಮ ಪಠಣದೊಂದಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ.


ಭಾಗವಹಿಸುವವರು ಎರಡು ಸಣ್ಣ ಹರಿವಾಣ, ನಾಣ್ಯ, ಲಲಿತ ಸಹಸ್ರನಾಮ ಪುಸ್ತಕ ತರಬೇಕು. ಲಲಿತ ಸಹಸ್ರನಾಮ ಪುಸ್ತಕ ಇಲ್ಲದವರಿಗೆ ಪುಸ್ತಕ ಮಾರಾಟ ಮಳಿಗೆಯಲ್ಲಿ ಖರೀದಿಗೆ ಲಭ್ಯವಿದೆ. ಮಾತಾ ಭಗಿನಿಯರು, ಕುಮಾರಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಳದಿಂದ ವಿನಂತಿಸಲಾಗಿದೆ.













