






ಕಡಬ: ಇಲ್ಲಿನ ಜೆ.ಎಂ.ಜೆ. ಆಸ್ಪತ್ರೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಯುವಕರಿಗಾಗಿ ಫಾರ್ಮಸಿ ಅಸಿಸ್ಟೆಂಟ್ ಮತ್ತು ನರ್ಸಿಂಗ್ ಅಸಿಸ್ಟೆಂಟ್ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭಿಸಲಾಗಿದೆ.
ಒಂದು ವರ್ಷದ ಅವಧಿಯ ಈ ಪ್ರಮಾಣಪತ್ರ ಕೋರ್ಸ್‌ಗಳು ಕೇವಲ ಸೈದ್ಧಾಂತಿಕ ವಿದ್ಯಾಭ್ಯಾಸಕ್ಕೆ ಸೀಮಿತವಾಗದೇ, ನೈಜ ಅನುಭವದೊಂದಿಗೆ ವಿದ್ಯಾರ್ಥಿಗಳನ್ನು ರೂಪಿಸುವ ಉದ್ದೇಶ ಹೊಂದಿವೆ. ಆಸ್ಪತ್ರೆಯಲ್ಲಿಯೇ ನೇರ ತರಬೇತಿ, ಅನುಭವಿ ವೈದ್ಯರು ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಕೌಶಲ್ಯಪೂರ್ಣ ವೃತ್ತಿಪರರಾಗಿ ಬೆಳೆವ ಅವಕಾಶ ಪಡೆಯಲಿದ್ದಾರೆ.


“ಆರೋಗ್ಯ ಸೇವೆ ಒಂದು ಉದ್ಯೋಗವಷ್ಟೇ ಅಲ್ಲ, ಅದು ಮಾನವೀಯ ಸೇವೆಯ ಮಾರ್ಗ” ಎಂಬ ನಿಲುವಿನೊಂದಿಗೆ ಈ ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಆಸ್ಪತ್ರೆಯ ನಿರ್ವಾಹಕರು ತಿಳಿಸಿದ್ದಾರೆ.
ಕೋರ್ಸ್ ಪೂರ್ಣಗೊಳಿಸಿದ ಬಳಿಕ ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ. ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಇದು ಮಹತ್ವದ ಅವಕಾಶವಾಗಿದೆ.



ಸೀಮಿತ ಸೀಟುಗಳು ಲಭ್ಯವಿದ್ದು, ಫಾರ್ಮಸಿ ಅಸಿಸ್ಟೆಂಟ್‌ಗೆ 5 ಮತ್ತು ನರ್ಸಿಂಗ್ ಅಸಿಸ್ಟೆಂಟ್‌ಗೆ 10 ಸೀಟುಗಳು ಮಾತ್ರ ಇರುವುದರಿಂದ ಆಸಕ್ತರು ತಕ್ಷಣವೇ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜೆ.ಎಂ.ಜೆ. ಆಸ್ಪತ್ರೆಗೆ ಸಂಪರ್ಕಿಸಬಹುದು.










