







ಪುತ್ತೂರು :ಜ್ಞಾನ ಮತ್ತು ಮೌಲ್ಯಗಳ ಬೆಳಕು ವಿದ್ಯೆ. ಇದು ಮಾನವನ ಜೀವನವನ್ನು ಬೆಳಗಿಸುವ ದೀಪವಾಗಿದೆ. ಶಿಕ್ಷಣವು ಕೇವಲ ಪುಸ್ತಕದ ಜ್ಙಾನವನ್ನು ನೀಡುವುದು ಅಷ್ಟೇ ಅಲದ್ಲೆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಿ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವ ಮಹತ್ವದ ಸಾಧನವಾಗಿದೆ. ಈ ಮಹತ್ವದ ಉದ್ದೇಶವನ್ನು ಮನದಲ್ಲಿಟ್ಟುಕೊಂಡು ಸ್ಥಾಪಿಸಲ್ಪಟ್ಟ ಶಿಕ್ಷಣ ಸಂಸ್ಥೆ ವಿದ್ಯಾರಶ್ಮಿ ವಿದ್ಯಾಲಯ.


ಪುತ್ತೂರಿನಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ 15 ಕಿ.ಮೀ.ಪ್ರಯಾಣಿಸಿದಾಗ ಸವಣೂರಿನ ಬಲಗಡೆಯ ಎತ್ತರದಲ್ಲಿ ನಿಸರ್ಗ ರಮಣೀಯ ಪ್ರದೇಶದಲ್ಲಿ ಮೈದೆಳೆದು ನಿಂತ ‘ವಿದ್ಯಾಗಂಗೋತ್ರಿ’. ವಿದ್ಯಾಕಾಂಕ್ಷಿಗಳನ್ನು ಕೈಬೀಸಿ ಕರೆಯುತ್ತಿರುವ ಸ್ವಚ್ಛ ಸುಂದರ ಗ್ರಾಮೀಣ ಪರಿಸರದ ಇಲ್ಲಿನ 27 ಎಕರೆ ಜಾಗದಲ್ಲಿದೆ ಈ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ಈ ಸಂಸ್ಥೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಸಮಾಜದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿದೆ. ಕರ್ನಾಟಕ ರಾಜ್ಯ ಮಟ್ಟದ ‘ಸಹಕಾರಿ ರತ್ನ’ ಪ್ರಶಸ್ತಿ ಪುರಸ್ಕೃತ, ಸವಣೂರು ಸೀತಾರಾಮ ರೈ ಕೆ. ರವರು 2001ರಲ್ಲಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದರು. ಗ್ರಾಮೀಣ ಪ್ರದೇಶದ ಮಕ್ಕಳಿಗೂ ನಗರ ಮಟ್ಟದ ಗುಣಮಟ್ಟದ ಮಹತ್ವದ ಶಿಕ್ಷಣ ದೊರಕಬೇಕೆಂಬ ಕನಸಿನಿಂದ ಈ ವಿದ್ಯಾಸಂಸ್ಥೆಯು ಹುಟ್ಟಿಕೊಂಡಿತು. ಸಣ್ಣ ಹೆಜ್ಜೆಯಿಂದ ಆರಂಭವಾದ ಪಯಣ 25 ವರ್ಷಗಳತ್ತ ಹೆಜ್ಜೆಯಿಡುತ್ತ ಕಾಲಿಡುತ್ತಿರುವ ಈ ಸಂಸ್ಥೆಯು ಅನೇಕ ಸಾಧನೆಗಳು, ಪ್ರಶಸ್ತಿಗಳು ಮತ್ತು ಯಶಸ್ಸುಗಳು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದೆ. ಈ ಶಿಕ್ಷಣ ಸಮುಚ್ಛಯದಲ್ಲಿ LKGಯಿಂದ ತೊಡಗಿ vÉÆqÀV PUC (Science-PCMB/PCMC & Commerce-EBAS/EBAC) ಮತ್ತು Degree – B.C.A. (Artificial Intelligence), B.Com. & B.A.)ವರೆಗಿನ ವ್ಯಾಸಂಗ ಒಂದೇ ಸೂರಿನಡಿ ಲಭ್ಯ.



ಸಂಸ್ಥೆಯು ಸತತವಾಗಿ ಪಿಯುಸಿ ಮತ್ತು 10ನೇ ತರಗತಿಯಲ್ಲಿ 100% ಫಲಿತಾಂಶದೊಂದಿಗೆ ರ್ಯಾಂಕ್ ಗಳನ್ನು ಪಡೆದುಕೊಂಡು ಬಂದಿದೆ. ಯಶಸ್ಸಿಗೆ ಸಂಸ್ಥೆಯು ಹೊಂದಿರುವ ಶಿಕ್ಷಣ ವ್ಯವಸ್ಥೆಯೇ ಪ್ರಮುಖ ಕಾರಣ. ಶೇಕಡಾ 35 ಅಂಕ ಪಡೆದುಕೊಂಡ ವಿದ್ಯಾರ್ಥಿಗಳನ್ನು ನಮ್ಮ ಸಂಸ್ಥೆಯಲ್ಲಿ ದಾಖಲಾತಿ ಮಾಡಿಕೊಂಡು, ಆ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಅಥವಾ ದ್ವಿತೀಯ ಪಿಯುಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದು ಉತ್ತೀರ್ಣರಾಗುತ್ತಾರೆ. ನವೆಂಬರ್ ತಿಂಗಳಲ್ಲಿ ಎಲ್ಲಾ ಪಾಠಗಳನ್ನು ಮುಗಿಸಿ ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡಿ ಪರೀಕ್ಷೆಗಿಂತ ಮುಂಚೆ ಹಲವು ಬಾರಿ ರಿವಿಷನ್ ಮಾಡಿಸಿ, ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವಂತೆ ನಮ್ಮ ಶಿಕ್ಷಕರು, ಉಪನ್ಯಾಸಕರು ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಪ್ರಗತಿಯ ಕಡೆಗೆ ವೈಯಕ್ತಿಕ ಕಾಳಜಿ ವಹಿಸುತ್ತಾರೆ. ಭವಿಷ್ಯದಲ್ಲಿ ನಿರ್ಭೀತಿಯಿಂದ ಬದುಕಲು ಜೀವನ ಪಾಠವನ್ನು ಈ ಸಂಸ್ಥೆಯು ಕಲ್ಪಿಸಿಕೊಡುತ್ತದೆ. ಹೀಗೆ ಸಾವಿರಾರು ಪ್ರತಿಭಾವಂತರನ್ನು ಸಮಾಜಕ್ಕೆ ಸಮರ್ಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದು. ವಿದ್ಯಾರ್ಥಿಗಳ ಶೈಕ್ಷಣಿಕ, ಭಾವನಾತ್ಮಕ ಯೋಗಕ್ಷೇಮವನ್ನು ನೋಡಿಕೊಳ್ಳಲು ನಮ್ಮ ಸಂಸ್ಥೆಯಲ್ಲಿ ಕೌನ್ಸಿಲರ್ ವ್ಯವಸ್ಥೆಯು ಇದೆ. ಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೂ ಮಹತ್ವ ನೀಡಲಾಗುತ್ತದೆ. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜ್ಞಾನ ಪ್ರದರ್ಶನಗಳು ಮತ್ತು ವಿವಿಧ ಪ್ರತಿಭಾ ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತದೆ. ಇದರಿಂಧ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣಗಳು, ತಂಡದ ಮನೋಭಾವ ಬೆಳೆಯುತ್ತದೆ.
ಈ ವಿದ್ಯಾಸಂಸ್ಥೆಯು ‘ರುಪ್ಸ ಕರ್ನಾಟಕ ಬೆಸ್ಟ್ ಮೇನೇಜ್ಮೆಂಟ್’ ಅವಾರ್ಡ್ ಪಡೆದುಕೊಂಡಿದೆ. ‘In pursuit of completeness’/’ಪರಿಪೂರ್ಣತೆಯ ಕಡೆಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಗಳಲ್ಲಿ ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶ ಹಾಗೂ ಇನ್ನಿತರ ಪ್ರದೇಶಗಳ ವಿದ್ಯಾರ್ಥಿಗಳು ವ್ಯಾಸಂಗ ನಿರತರಾಗಿದ್ದಾರೆ.
ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಸೌಲಭ್ಯಗಳು
*ಅನುಭವಿ ಉಪನ್ಯಾಸಕರಿಂದ CET/NEET ತರಬೇತಿ
*ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್,3D ಪ್ರಿಂಟರ್, ಹೊಸತಲೆಮಾರಿನ ದೂರದರ್ಶಕಗಳು ಸಹಿತವಾದ Atal Tinkering Lab ಸ್ಮಾರ್ಟ್ ಬೋರ್ಡ್.
*ಕೆ.ಜಿ. ವಿಭಾಗದ ಮಕ್ಕಳಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ, ಅತ್ಯಾಕರ್ಷಕವಾದ Double Doom Building.
*ಶಾಲಾ ಬಸ್ಗಳು.
*ಮಕ್ಕಳ ಸುಭದ್ರತೆಗಾಗಿ ಎಲ್ಲೆಡೆ ಸಿ.ಸಿ.ಟಿ.ವಿ. ಕ್ಯಾಮರಾಗಳ ಕಣ್ಗಾವಲು.
*6ನೇ ತರಗತಿಯಿಂದ ಮೇಲ್ಪಟ್ಟ ಹುಡುಗ ಮತ್ತು ಹುಡುಗಿಯರಿಗಾಗಿ ಸುಸಜ್ಜಿತ ವಸತಿ ನಿಲಯಗಳು. (ಬೇಡಿಕೆಯನ್ನಾಧರಿಸಿ ಪುಟ್ಟ ಮಕ್ಕಳಿಗೂ ಹಾಸ್ಟೆಲ್ ವ್ಯವಸ್ಥೆ)
*ಸುಸಜ್ಜಿತವಾದ ಆಟದ ಮೈದಾನದೊಂದಿಗೆ ಪುಟಾಣಿ ಮಕ್ಕಳಿಗಾಗಿ ಆಟೋಪಕರಣಗಳು.
*ವಿಶಾಲವಾದ ಮತ್ತು ವ್ಯವಸ್ಥಿತವಾದ ಸಭಾಂಗಣ.
ಶಾಲೆಯ ವಿಶೇಷತೆಗಳು
*10ನೇ ತರಗತಿಯಲ್ಲಿ ಮತ್ತು ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ ಮತ್ತು ವಿಜ್ಞಾನ ವಿಭಾಗದಲ್ಲಿ ಸತತ 100% ಫಲಿತಾಂಶ.
*100 mbps ವೇಗದ ಅಂತರ್ಜಾಲ ಸಂಪರ್ಕವಿರುವ ಕಂಪ್ಯೂಟರ್ ಪ್ರಯೋಗಾಲಯಗಳು
*ಗೋಡೆಯ ತುಂಬಾ ವರ್ಣಮಯ ವರ್ಲಿ ಚಿತ್ರಗಳ ಮೂಲಕ ಭಾರತೀಯ ಸಂಸ್ಕೃತಿಯ ಪ್ರಸಾರ.
*ವಿಜ್ಞಾನ ಪ್ರಯೋಗಾಲಯಗಳ ವ್ಯವಸ್ಥೆ.
ಪಾಠ ಬಿಟ್ಟು ಇನ್ನೇನಿದೆ
*ಡ್ರೋನ್ ನಿರ್ಮಾಣ ತರಬೇತಿ
*ಕಂಪ್ಯೂಟರ್ ಕೋಡಿಂಗ್ ತರಬೇತಿ
*ವಿಜ್ಞಾನ ಮಾದರಿ ತಯಾರಿ ತರಬೇತಿ
*Inspire Award ತರಬೇತಿ
*Olympiad Exam
*ಭಾಷಣ ಕಲೆ, ಯೋಗ-ಪ್ರಾಣಾಯಾಮ, Spoken English ತರಬೇತಿಗಳು.
*ಉಚಿತ ಸಂಸ್ಕೃತ ಕಲಿಕೆ.
*ಭಜನೆ, ಕರಾಟೆ, ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ನೃತ್ಯ,
*ವಾಲಿಬಾಲ್ / ತ್ರೋಬಾಲ್ / ಕಬಡ್ಡಿ/ಕ್ರಿಕೆಟ್ / ಅತ್ಲೆಟಿಕ್ ಇತರ ಆಟೋಟಗಳ ತರಬೇತಿ
*ವೈಟ್ಲಿಫ್ಟಿಂಗ್ / ಜಿಮ್ ಸೌಲಭ್ಯಗಳು
ಶಾಲಾ ವಾಹನಗಳು
ಗಡಿಪಿಲ, ಭಕ್ತಕೋಡಿ, ಸರ್ವೆ, ಪಣೆಮಜಲು, ಮಾಂತೂರು, ಸೋಂಪಾಡಿ, ಕುಂಬ್ರ, ತಿಂಗಳಾಡಿ, ಕೈಯ್ಯೂರು, ಮಾಡಾವು, ತಾರಿಪಡ್ಪು, ಕುಮಾರಮಂಗಲ, ಪುಣ್ಚಪ್ಪಾಡಿ, ಪಂಜಳ, ಕೂಡುರಸ್ತೆ, ಕೆಡೆಂಜಿ, ಅಲಂಗಾರು, ದೈಪಿಲ, ಚಾರ್ವಾಕ, ಕಾಣಿಯೂರು, ಕಾಯರ್ತಡ್ಕ, ಬೆಳಂದೂರು, ಕುದ್ಮಾರು, ಮೊಗರು, ಬೊಬ್ಬೆಕೇರಿ, ದಖಾ?ಸು, ಕಲ್ಲೋಣಿ, ಬೆಳ್ಳಾರೆ, ಪೆರುವಾಜೆ, ಕೂಡನಕಟ್ಟೆ, ಕುಂಡಡ್ಕ, ಮುಕ್ಕೂರು, ಬಂಬಿಲ, ಪರಣೆ ಹಾಗೂ ಇನ್ನಿತರ ಸ್ಥಳಗಳಲ್ಲಿ ನಮ್ಮ ಶಾಲಾ ವಾಹನಗಳೂ ಓಡಾಡುತ್ತವೆ.

ರಾಜ್ಯಮಟ್ಟದ ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತರಾದ ಸವಣೂರು ಸೀತಾರಾಮ ರೈ ಕೆ. ಅವರು 2001ರಲ್ಲಿ ಈ ಸಂಸ್ಥೆಗಳನ್ನು ಸ್ಥಾಪಿಸಿದರು. ಸೇನಾನಿ, ಸಹಕಾರಿ, ಕೃಷಿಕ ಮತ್ತು ಶಿಕ್ಷಕರಾಗಿದ್ದ ಅವರ ಪಿತೃಶ್ರೀ ಶೀಂಟೂರು ನಾರಾಯಣ ರೈಯವರ ಸ್ಮರಣಾರ್ಥ ಸ್ಥಾಪಿಸಲ್ಪಟ್ಟ ಈ ಸಂಸ್ಥೆಗಳು ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿವೆ. ರಾಜ್ಯ ಮಟ್ಟದ ಕೃಷಿ, ಜಾನಪದ, ಸಾಹಿತ್ಯ ಸಮ್ಮೇಳನಗಳನ್ನು ವಿದ್ಯಾರಶ್ಮಿಯ ಆವರಣದಲ್ಲಿ ಯಶಸ್ವಿಯಾಗಿ ಆಯೋಜಿಸಿರುವುದು ಶಾಸ್ವತವಾಗಿ ನೆನಪಿನಲ್ಲಿ ಉಳಿಯುವಂತಾಗಿದೆ. ಕೆ.ಎಂ.ಎಫ್.ನ ಮಾಜಿ ಅಧ್ಯಕ್ಷರಾಗಿ, ಡಿ.ಸಿ.ಸಿ. ಬ್ಯಾಂಕ್, ಮಾಸ್, ಎಸ್.ಕೆ.ಎ.ಸಿ.ಎಂ.ಎಸ್., ಟಿ.ಎ.ಪಿ.ಸಿ.ಎಂ.ಎಸ್., ಹಾಲುತ್ಪಾದಕರ ಸೊಸೈಟಿ, ರಬ್ಬರ್ ಬೆಳೆಗಾರರ ಸಂಘ, ಪ್ರಾ. ಕೃ. ಪತ್ತಿನ ಸಹಕಾರಿ ಸಂಘಗಳೂ ಸೇರಿದಂತೆ ವಿವಿಧ ಸಹಕಾರಿ ಸಂಘಗಳಲ್ಲಿ ದುಡಿದ ನಿಸ್ವಾರ್ಥಿ ಸಹಕಾರಿ ಅವರು. ಇವರ ನೇತೃತ್ವದಲ್ಲಿ ವಿದ್ಯಾರಶ್ಮಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಮೂಲತಃ ಇಂಜಿನಿಯರ್ ಆಗಿರುವ ಅಶ್ವಿನ್ ಎಲ್. ಶೆಟ್ಟಿಯವರು ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಮಾನ ನಿರ್ಮಾಣ ಕಂಪೆನಿಯಾದ ಏರ್ ಬಸ್ ಹೆಲಿಕಾಪ್ಟರ್ಸ್ನಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿ ವಿವಿಧ 8 ರಾಷ್ಟ್ರಗಳಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ತಾಯ್ನಾಡಿನಲ್ಲಿ ಶೈಕ್ಷಣಿಕ ಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಪಾಲಿಟೆಕ್ನಿಕ್ನಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಇವರು ಮುಂದೆ ಬಿ.ಇ. ವ್ಯಾಸಂಗದ ಬಳಿಕ ಸ್ನಾತಕೋತ್ತರ ಪದವಿಯಲ್ಲೂ ರ್ಯಾಂಕ್ ಗಳಿಸಿದವರು. ಇತ್ತೀಚೆಗೆ ಕಾನೂನು ಪದವಿಯನ್ನು ಪಡೆದು ಆಲ್ ಇಂಡಿಯ ಬಾರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಮುಂದೆ ಇವರು ಭಾರತದ ಯಾವುದೇ ನ್ಯಾಯಲಯದಲ್ಲಿ ವೃತ್ತಿಯನ್ನು ಮಾಡಲು ಅರ್ಹರಾಗಿರುತ್ತಾರೆ. ರೋಬೋಟಿಕ್ಸ್, ರಾಕೆಟ್, ಡ್ರೋನ್ ತಂತ್ರಜ್ಞಾನಗಳಲ್ಲಿ ಸಿದ್ಧ ಹಸ್ತರಾಗಿರುವ ಇವರು ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರೂ ಹೌದು. ಇದೀಗ ತನ್ನ ದೂರದರ್ಶಿತ್ವದ ಫಲವಾಗಿ ವಿದ್ಯಾರಶ್ಮಿ ಆವರಣವನ್ನು ಆಧುನೀಕರಣಗೊಳಿಸುತ್ತಾ ನವೀನ ಶಿಕ್ಷಣ ಪದ್ಧತಿಯನ್ನು ಅಳವಡಿಸಿದ್ದಾರೆ.










