






ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ 13ನೇ ವರ್ಷದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಮಾ.20ರಂದು ದೈವಸ್ಥಾನದಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.


ಬೆಳಗ್ಗೆ ಕಡೆಂಬಿಲ ನಾಗಬನದಲ್ಲಿ ನಾಗತಂಬಿಲ ನಡೆಯಿತು. ನಂತರ ದೈವಸ್ಥಾನದಲ್ಲಿ ಗಣಹೋಮ, ಕಲಶಪೂಜೆ, ದೈವಗಳಿಗೆ ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.



ದೈವಸ್ಥಾನದ ಅರ್ಚಕರಾದ ಸುಕುಮಾರ ಯಡಪಡಿತ್ತಾಯ ಕೊಕ್ಕಡ, ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ, ಆಡಳಿತ ಸಮಿತಿ ಅಧ್ಯಕ್ಷರಾದ ವಿಠಲ ರೈ ಕೊಣಾಲುಗುತ್ತು, ಸದಸ್ಯರಾದ ಜಗದೀಶ್ ಶೆಟ್ಟಿ ಕಡೆಂಬಿಲ, ಪ್ರಕಾಶ್ ಸುವರ್ಣ ಕುರುಂಬೊಟ್ಟು, ವಿಶ್ವನಾಥ ಪೂಜಾರಿ ಕಲಾಯಿ, ವಿಶ್ವಾಸ್ ಗೌಡ ಕಾಯರ್ತಡ್ಕ, ದಿನೇಶ್ ಗೌಡ ಕೋಲ್ಪೆ, ವಿಶ್ವನಾಥ ಪೂಜಾರಿ ಪಾಂಡಿಬೆಟ್ಟು, ಬೈಲುವಾರು ಸಮಿತಿ ಅಧ್ಯಕ್ಷರಾದ ಭಾಸ್ಕರ ರೈ ತೋಟ, ಸಂಚಾಲಕರಾದ ಲಿಂಗಪ್ಪ ಗೌಡ ದರ್ಖಾಸು, ಯಶವಂತ ಮರಂದೆ, ಲೋಕೇಶ ಅಗರ್ತ, ನೋಣಯ್ಯ ಗೌಡ ಡೆಬ್ಬೇಲಿ, ಜನಾರ್ದನ ಗೌಡ ಬೊಳ್ಳುರ್ಪು, ಶ್ರೀಧರ ಪೂಜಾರಿ ಅಂಬರ್ಜೆ, ರಮೇಶ ಪೂಜಾರಿ ಅಂಬರ್ಜೆ, ಎಂ.ಪಿ.ಜತ್ತಪ್ಪ ಗೌಡ ಮಣ್ಣಮಜಲು, ಪ್ರವೀಣ ದೇವಾಡಿಗ ಗಾಣದಕೊಟ್ಟಿಗೆ, ತಾರಾನಾಥ ಗೌಡ ಎಣ್ಣೆತ್ತೋಡಿ, ಬಾಬು ಪಿ.ಪಾಂಡಿಬೆಟ್ಟು, ದಿನೇಶ ಬಂಗೇರ ಕಲಾಯಿ, ಸಂತೋಷ್ ಎಣ್ಣೆತ್ತೋಡಿ, ರಮೇಶ ಗೌಡ ಕಾಯರ್ತಡ್ಕ, ಗಣೇಶ ಚಾಮೆತ್ತಮೂಲೆ, ಜನಾರ್ದನ ಗೌಡ ಶಾಂತಿಮಾರು, ಧರ್ಣಪ್ಪ ದಾಸ್ ಸುಪ್ರೀತನಿಲಯ, ಪ್ರಮೀಳಾ ಗಾಣದಕೊಟ್ಟಿಗೆ, ಪೂರ್ಣಿಮಾ ಕಡೆಂಬಿಲ, ವಸಂತಿ ಮಣ್ಣಮಜಲು, ಪುಷ್ಪ ಪಾಂಡಿಬೆಟ್ಟು, ರತ್ನಾವತಿ ಕಲಾಯಿ, ಶೋಭ ಅಂಬರ್ಜೆ, ಲಲಿತ ತಿರ್ಲೆ, ವಾರಿಜ ಎಣ್ಣೆತ್ತೋಡಿ, ಬಬಿತ ಕೋಲ್ಪೆ, ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಮುತ್ತಪ್ಪ ಗೌಡ ಎಣ್ಣೆತ್ತೋಡಿ ಸಹಿತ ಕೊಣಾಲು ಗ್ರಾಮಸ್ಥರು, ಹಲವು ಗಣ್ಯರು ಭಾಗವಹಿಸಿದ್ದರು.










