







ಪುಣಚ: ಪುಣಚ ಗ್ರಾಮದ ಮಲೆತ್ತಡ್ಕ, ಕೊಪ್ಪರತೊಟ್ಟು ಆಜೇರು ಸಂಪರ್ಕ ರಸ್ತೆಗೆ ದಕ್ಷಿಣ ಕನ್ನಡದ ಸಂಸದ ಬ್ರಿಜೇಶ್ ಚೌಟ ರವರ 5 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗಲಿರುವ ಸೇತುವೆ ಕಾಮಗಾರಿಯ ಗುದ್ದಲಿ ಪೂಜೆ ಮಾ.22ರಂದು ನಡೆಯಿತು.


ಕೃಷ್ಣ ಪ್ರಸಾದ್‌ರವರು ತೆಂಗಿನಕಾಯಿ ಒಡೆದರು. ಭಾರತೀಯ ಜನತಾ ಪಾರ್ಟಿಯ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಉಜಿರೆಮಾರ್ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಪುಣಚ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ ಪ್ರಭು ಎಲ್ಲರನ್ನು ಸ್ವಾಗತಿಸಿ ಅಭಿನಂದಿಸಿದರು.



ಈ ಸಂದರ್ಭದಲ್ಲಿ ಪುಣಚ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಪಂಚಾಯತ್ ಸದಸ್ಯರಾದ ತೀರ್ಥರಾಮ ನಾಯಕ್ ಆಜೇರು, ಅಶೋಕ್ ಮೂಡಂಬೈಲು, ಸ್ಥಳೀಯರಾದ ವೇದಕೃಷ್ಣ, ರಘುರಾಮ್ ಭಟ್, ಗುರುವಪ್ಪ ಪೂಜಾರಿ, ಉದಯ ಭಾಸ್ಕರ, ಅಜಯ್ ಶಾಸ್ತ್ರಿ ಮತ್ತು ರಸ್ತೆಯ ಫಲಾನುಭವಿಗಳು ಹಾಗೂ ಗುತ್ತಿಗೆದಾರ ಕೀರ್ತೇಶ್ ಉಪಸ್ಥಿತರಿದ್ದರು.










