







ಮಾ.25: ಮಹಾಚಂಡಿಕಾಯಾಗ, ಆಶ್ಲೇಷ ಪೂಜೆ, ದೈವಗಳ ಪ್ರತಿಷ್ಟೆ


ಪುಣಚ: ಸುಮಾರು 900ವರ್ಷಗಳ ಇತಿಹಾಸವಿರುವ ಇಲ್ಲಿನ ಬೈಲುಗುತ್ತು ಕುಟುಂಬಸ್ಥರ ಧರ್ಮದೈವ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ನೇಮೋತ್ಸವ ಮಾ.24ರಿಂದ ಮಾ.೨೬ರವರೆಗೆ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.



ಧಾರ್ಮಿಕ ಕಾರ್ಯಕ್ರಮಗಳು:
ಮಾ.24ರಂದು ಬೆಳಿಗ್ಗೆ ಗಂಟೆ 9ರಿಂದ ತಂತ್ರಿವರ್ಯರ ಆಗಮನ, ಸಾಮೂಹಿಕ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ಪ್ರಸಾದ ಶುದ್ಧಿ,ಮಹಾಗಣಪತಿ ಹೋಮ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 6ರಿಂದ ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಮಾ.25ರಂದು ಬೆಳಿಗ್ಗೆ 7ರಿಂದ ಪ್ರತಿಷ್ಠಾ ಹೋಮ, ಮಹಾಚಂಡಿಕಾಯಾಗ ನಡೆದು 9:56ರ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಆಶ್ಲೇಷ ಬಲಿಪೂಜೆ, ತಂಬಿಲಸೇವೆ, ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ದೈವಗಳ ನೇಮೋತ್ಸವ:
ಮಾ.25ರ ಸಾಯಂಕಾಲ 6ರಿಂದ ದೈವಗಳ ಭಂಡಾರ ತೆಗೆಯುವುದು, ನೇತ್ರಚಾಮುಂಡಿ ದೈವದ ನೇಮ, ಅನ್ನಸಂತರ್ಪಣೆ ಬಳಿಕ ಗುಳಿಗ ದೈವ ಮತ್ತು ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ. ಮಾ.26ರಂದು ಸಾಯಂಕಾಲ 6ರಿಂದ ದೈವಗಳ ಭಂಡಾರ ತೆಗೆಯುವುದು, ಪಿತೃ ಆರಾಧನೆ, ವರ್ಣರ ಪಂಜುರ್ಲಿ ದೈವದ ನೇಮ ರಾತ್ರಿ ಅನ್ನಸಂತರ್ಪಣೆ ನಡೆದು ಕುಟುಂಬದ ಧರ್ಮದೈವ ಶ್ರೀ ಧೂಮಾವತಿ ದೈವದ ನೇಮೋತ್ಸವ ನಡೆಯಲಿದೆ ಎಂದು ಬೈಲುಗುತ್ತು ಕುಟುಂಬ-ಬಂಧುಗಳ ಪ್ರಕಟಣೆ ತಿಳಿಸಿದೆ.










