






ರಾಮಕುಂಜ: ಮಾ.29 ರಿಂದ ಏ.2ರ ತನಕ ನಡೆಯಲಿರುವ ಕೊಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಮಾ.24ರಂದು ಅಂಬಾಬೀಡು ತೋಟದಲ್ಲಿ ಗೊನೆ ಮುಹೂರ್ತ ನಡೆಯಿತು.



ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣುಮೂರ್ತಿ ಬಡಕಿಲ್ಲಾಯ ಹಾಗೂ ಲಕ್ಷ್ಮೀನಾರಾಯಣ ರಾವ್ ಆತೂರು ಅವರು ಪೂಜಾ ವಿಧಿವಿಧಾನಗಳೊಂದಿಗೆ ಗೊನೆ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನೀರಜ್ ಕುಮಾರ್ ರೈ ಅರುವಾರಬಾಳಿಕೆ, ಸದಸ್ಯರಾದ ಯತೀಶ್ ಗುಂಡಿಜೆ, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಸಂಜೀವ ಸುದೆಂಗಳ, ಉತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಕೊರಿಕ್ಕಾರು, ಉಪಾಧ್ಯಕ್ಷರಾದ ಮೋಹನದಾಸ್ ಶೆಟ್ಟಿ ಬಡಿಲ, ರಾಜೀವ ಗೌಡ ಪೊಸಲಕ್ಕೆ, ಜೊತೆ ಕಾರ್ಯದರ್ಶಿ ಶಾಂತಾರಾಮ ಬೇಂಗದಪಡ್ಪು, ರಘುನಾಥ ಶೆಟ್ಟಿ ಕಲ್ಕಂಪಾಡಿ, ಅಂಬಾಬೀಡು ಕುಟುಂಬದ ಹಿರಿಯರಾದ ಜಗನ್ನಾಥ ರೈ, ಗಂಗಾಧರ ರೈ, ಪ್ರಕಾಶ್ ಶೆಟ್ಟಿ ಅಮೈ, ಸೃಜನ್, ಮನೋಜ್ ಶೆಟ್ಟಿ, ಜಯಕರ ರೈ ಬುಡಲೂರು, ಆನಂದ ಆಳ್ವ, ಶಶಿಕುಮಾರ್ ಶೆಟ್ಟಿ, ಸ್ಥಳೀಯರ ಪ್ರಮುಖರಾದ ವಿನಯ ಶೆಟ್ಟಿ ಪಟ್ಟೆ, ಪರಮೇಶ್ವರ ಪೂಜಾರಿ, ನೋಣಯ್ಯ ಅಂಬ, ಮೋನಪ್ಪ ಗೌಡ ಹಾಗೂ ಅಂಬಾಬೀಡು ಕುಟುಂಬಸ್ಥರು, ಪದಾಧಿಕಾರಿಗಳು, ಬೈಲುವಾರು ಸಮಿತಿಯವರು, ಗ್ರಾಮಸ್ಥರು ಉಪಸ್ಥಿತರಿದ್ದರು.












