






ಪುತ್ತೂರು: ಕಡಬ ತಾಲೂಕು ಚಾರ್ವಾಕ ಗ್ರಾಮದ ಆಂತ್ರ ದಿ|ಲಕ್ಷ್ಮಣ ಗೌಡರ ಪತ್ನಿ ಮುತ್ತಮ್ಮ ಅಂತ್ರ (97ವ.)ರವರು ವಯೋಸಹಜ ಅಸೌಖ್ಯದಿಂದ ಮಾ.23ರಂದು ನಿಧನ ಹೊಂದಿರುತ್ತಾರೆ. ಮೃತರು ಪುತ್ರರಾದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ನಿವೃತ್ತ ಕಚೇರಿ ಅಧೀಕ್ಷಕ ಕೃಷ್ಣಪ್ಪ ಗೌಡ, ಹೊನ್ನಪ್ಪ ಗೌಡ, ರವಿ ಜಿ. ಆಂತ್ರ, ಪುತ್ರಿಯರಾದ ರೇವತಿ ನೇಮಣ್ಣ ಗೌಡ ಅಂಬುಲ, ಕಮಲ ಬಾಬುಗೌಡ ಪಟ್ಟೆ, ದೇವಕಿ ಚೆನ್ನಪ್ಪ ಗೌಡ ಕಟ್ಟತ್ತರು ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.












