ಗಂಡಿಬಾಗಿಲು: ಸುಲ್ತಾನ್ ದಾರಿಮಿಯವರಿಗೆ ಸನ್ಮಾನ, ಬೀಳ್ಕೊಡುಗೆ

0

ರಾಮಕುಂಜ: ಗಂಡಿಬಾಗಿಲು ಖುತುಬಿಯ್ಯಾ ಜುಮಾ ಮಸೀದಿಯಲ್ಲಿ ಖತೀಬ್ ಆಗಿ ಸೇವೆ ಸಲ್ಲಿಸಿರುವ ಅಬ್ದುಲ್ ರಜಾಕ್ ಸುಲ್ತಾನ್ ದಾರಿಮಿ ಮತ್ತು ಮುಅದ್ದಿಂ ಆಗಿ ಸೇವೆ ಸಲ್ಲಿಸಿರುವ ಬಶೀರ್ ದಾರಿಮಿಯವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಮಾ.20ರಂದು ಜರಗಿತು.


ಮಸೀದಿಯಲ್ಲಿ ನಡೆದ ಸಮಾರಂಭದಲ್ಲಿ ಮಸೀದಿ ಅಧ್ಯಕ್ಷ ಎಸ್. ಅಬ್ದುಲ್ ರಹಿಮಾನ್ ಹಾಗೂ ಪ್ರಧಾನ ಕಾರ‍್ಯದರ್ಶಿ ನಝೀರ್ ಪೂರಿಂಗ ಶಾಲು ಹೊದಿಸಿ ಸನ್ಮಾನಿಸಿ, ಗೌರವಾರ್ಪಣೆ ಸಲ್ಲಿಸಿದರು. ಸಮಾರಂಭದಲ್ಲಿ ಕೋಶಾಧಿಕಾರಿ ಹಸೈನಾರ್ ಹಾಜಿ, ಉಪಾಧ್ಯಕ್ಷ ಜಿ. ಮಹಮ್ಮದ್ ರಫೀಕ್, ಪದಾಧಿಕಾರಿಗಳಾದ ಝಿಯಾದ್, ಅಬ್ದುಲ್ ರಜಾಕ್ ಮರ‍್ವೇಲ್, ಆದಂ ಹಾಜಿ ಎಸ್., ಜಿ.ಎಂ. ರಜಾಕ್, ಎಸ್. ರಜಾಕ್, ಯಾಕೂಬ್ ಕುಂಟಲ್ತಡಿ, ಜಿ. ಇಸ್ಮಾಯಿಲ್, ನೂಜೂಮುಲ್ ಇಸ್ಲಾಂ ಯಂಗ್‌ಮೆನ್ಸ್ ಪದಾಧಿಕಾರಿಗಳಾದ ನಿಝಾರ್, ಪಿ.ಲತೀಫ್, ಶಾಕಿರ್, ಝಕರಿಯಾ ನೇರೆಂಕಿ, ಎಸ್.ಕೆ.ಎಸ್.ಎಸ್.ಎಫ್. ಪದಾಧಿಕಾರಿಗಳಾದ ಎಸ್.ಪಿ. ಖಲಂದರ್, ಇಸಾಕ್ ಬೊಲುಂಬುಡ, ಮಹಮ್ಮದ್ ಆಲಿ, ಆಶಿಫ್, ನೌಫಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here