







ಪುತ್ತೂರು: ಮೆಸ್ಕಾಂ ಪುತ್ತೂರು ನಗರದ ಉಪ ವಿಭಾಗದಲ್ಲಿ ಕಂದಾಯ ವಸೂಲಾತಿ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು ಮಾರ್ಚ್ ಮಾಸಾಂತ್ಯದ ಸಾರ್ವತ್ರಿಕಾ ರಜಾ ದಿನಗಳಲ್ಲಿ ಪುತ್ತೂರು ಉಪ ವಿಭಾಗದ ಬನ್ನೂರಿನ ಕಚೇರಿಯಲ್ಲಿ ಕ್ಯಾಶ್ ಕೌಂಟರ್(ನಗದು ಮುಂಗಟ್ಟೆ) ಕಾರ್ಯನಿರ್ವಹಿಸಲಿದೆ.


ಸಾರ್ವತ್ರಿಕ ರಜಾದಿನಗಳಾದ ಮಾ.28ರ ನಾಲ್ಕನೇ ಶನಿವಾರ, ಮಾ.29 ಆದಿತ್ಯವಾರ ಹಾಗೂ ಮಾ.30ಮಹಾವೀರ ಜಯಂತಿ ಈ ಮೂರು ದಿನಗಳಲ್ಲಿ ಬನ್ನೂರಿನ ಕಚೇರಿಯ ಕ್ಯಾಶ್ ಕೌಂಟರ್ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30ರ ತನಕ ಕಾರ್ಯನಿರ್ವಹಿಸಲಿದೆ.



ವಿದ್ಯುತ್ ಬಳಕೆದಾರರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಈ ಹಿಂದಿನ ಬಾಕಿಯು ಸೇರಿದಂತೆ ಮಾರ್ಚ್ 2026 ರಲ್ಲಿ ಬೇಡಿಕೆ ಮಾಡಲ್ಪಟ್ಟ ಸಂಪೂರ್ಣ ಮೊತ್ತವನ್ನು ಪಾವತಿಸಿ ಸಹಕರಿಸಬೇಕು. ಬಿಲ್ಲನ್ನು ಪಾವತಿಸದ ಬಳಕೆದಾರರ ಸ್ಥಾವರಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಮೆಸ್ಕಾಂ ಪ್ರಕಟಿಸಿದೆ.










