ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಜಾತ್ರೋತ್ಸವ-ಹಸಿರುವಾಣಿ ಸಮರ್ಪಣೆ

0

ರಾಮಕುಂಜ: ಕಡಬ ತಾಲೂಕು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.29ರಂದು ಬೆಳಗ್ಗೆ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಊರವರಿಂದ ಹಸಿರುವಾಣಿ ಸಮರ್ಪಣೆ ನಡೆಯಿತು.


ಗ್ರಾಮದ ವಿವಿಧ ಕಡೆಗಳಿಂದ ಆಗಮಿಸಿದ ಹೊರಕಾಣಿಕೆ ವಾಹನಗಳನ್ನು ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಬರಮಾಡಿಕೊಳ್ಳಲಾಯಿತು. ಬಳಿಕ ಚೆಂಡೆ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಸಾಗಿ ದೇವರಿಗೆ ಸಮರ್ಪಣೆ ಮಾಡಲಾಯಿತು. ದೇವಸ್ಥಾನದ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ ಅವರು ಹೊರಕಾಣಿಕೆಗೆ ಪೂಜೆ ಸಲ್ಲಿಸಿದರು. ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಅವರು ಪೂಜಾ ವಿಧಿ ವಿಧಾನ ನೆರವೇರಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ ಕುಮಾರ್ ರೈ ಅರುವಾರ ಬಾಳಿಕೆ, ಸದಸ್ಯರಾದ ಸುನೀತ್‌ರಾಜ್ ಶೆಟ್ಟಿ, ಯತೀಶ್ ಗುಂಡಿಜೆ, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಸಂಜೀವ ಸುದೆಂಗಳ, ಗೋಪಾಲ ನಾಯ್ಕ ಸೀಗೆತ್ತಡಿ, ಸುಜಾತ ಜೆ ಶೆಟ್ಟಿ ಬಡಿಲ, ಮೀನಾಕ್ಷಿ ಕೆ ಮುಂಡೈಮಾರ್, ಉತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಕೋರಿಕ್ಕಾರು, ಪ್ರಧಾನ ಕಾರ್ಯದರ್ಶಿ ಕೊರಗಪ್ಪ ಗೌಡ ಮುಂಡೈಮಾರ್, ಉಪಾಧ್ಯಕ್ಷರಾದ ಮೋಹನ್‌ದಾಸ್ ಶೆಟ್ಟಿ ಬಡಿಲ, ಸಂಜೀವ ಗೌಡ ಪರಂಗಾಜೆ, ಶ್ರೀನಿವಾಸ ಗೌಡ ಪಲ್ಲಡ್ಕಪಟ್ಟೆ, ರಾಜೀವ ಗೌಡ ಪೊಸಲಕ್ಕೆ, ಗಣೇಶ್ ಎರ್ಮಡ್ಕ, ಜೊತೆ ಕಾರ್ಯದರ್ಶಿಗಳಾದ ಶಶಿಕಮಾರ್ ಅಂಬಾ, ಶಾಂತರಾಮ ಬೆಂಗದಪಡ್ಪು, ಜ್ಯೋತಿ ಕಲ್ಕಾಡಿ, ರಘುನಾಥ ಶೆಟ್ಟಿ ಕಲ್ಕಂಪಾಡಿ, ಸದಸ್ಯರಾದ ರವೀಂದ್ರ ಗೌಡ ಸಂಕೇಶ, ಉಮೇಶ್ ಬುಡಲೂರು, ಪರಮೇಶ್ವರ ಗೌಡ ಸಬಳೂರು, ತಿಮ್ಮಪ್ಪ ಗೌಡ ಸಂಕೇಶ, ಚಿದಾನಂದ ಪಾನ್ಯಾಲು, ಗಂಗಾಧರ ಗೌಡ ಪರಂಗಾಜೆ, ಯತೀಶ್ ಪುತ್ಯೆ, ವಸಂತ ಪೊಸಲಕ್ಕೆ, ಸುಧೀಶ್ ಪಟ್ಟೆ, ಮೋಹನಚಂದ್ರ ಪಲ್ಲಡ್ಕ, ರಮೇಶ್ ದಾಸ್ ಕಲಾಯಿ, ನಾಗೇಶ್ ನೀಲಮೆ, ವಿಶ್ವನಾಥ ಪುತ್ಯೆ, ಜನಾರ್ದನ ನಡುಗುಡ್ಡೆ, ಲಕ್ಷ್ಮಣ ಗೌಡ ಆನೆಗುಂಡಿ, ಪ್ರಕಾಶ್ ಕೆಮ್ಮಾರ, ಕೃಷ್ಣಪ್ಪ ಕಾಯರಕಟ್ಟ, ರುಕ್ಮಯ್ಯ ಗೌಡ ಕಾಯರಕಟ್ಟ , ಗ್ರಾಮ ಸಂಚಾಲಕ ಭವಿತ್‌ರಾಜ್ ಪಲ್ಲಡ್ಕಪಟ್ಟೆ, ಸಹಸಂಚಾಲಕ ಪ್ರವೀಣ್‌ರಾಜ್ ಕೆ.ಎಸ್ ಕೊಲ್ಯ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಪ್ರಮುಖರಾದ ಪಾಂಡೇಲುಗುತ್ತು ಚಂದ್ರಹಾಸ ರೈ, ಶೀನಪ್ಪ ಗೌಡ ವಳಕಡಮ, ಭವಾನಿಶಂಕರ ಗೌಡ ಪರಂಗಾಜೆ, ಕೆ.ಎಸ್.ಬಾಲಕೃಷ್ಣ ಗೌಡ ಕೊಲ್ಯ, ಸಂಜೀವ ಗೌಡ ಕೊನೆಮಜಲು, ಸುಭಾಷ್ ಶೆಟ್ಟಿ ಅರುವಾರಬಾಳಿಕೆ, ಪುಷ್ಪಾಸುಭಾಷ್ ಶೆಟ್ಟಿ, ಅಶೋಕ್ ಗೋಕುಲನಗರ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here