ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆ

0

ಬೆಟ್ಟಂಪಾಡಿ: ಭಾರತ ಸರಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೀಡುವ ಇನ್ಸ್ಪೈರ್ ಅವಾರ್ಡ್ ಮಾನಕ್ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಗೆ ನವೋದಯ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.


9ನೇ ತರಗತಿಯ ಕೃತಿಕಾ (ಕುವೆಂಜದ ದಿ. ವೆಂಕಪ್ಪ ನಾಯ್ಕ ಮತ್ತು ವಾರಿಜ ದಂಪತಿ ಪುತ್ರಿ) ಇವರು ತಯಾರಿಸಿದ ಮಾದರಿ *Smart Night Lamp* ಮತ್ತು ಯತನ್ (ಇರ್ದೆಯ ಪುಷ್ಪರಾಜ್ ಮತ್ತು ಗೌರಿ ದಂಪತಿ ಪುತ್ರ) ಇವರು ತಯಾರಿಸಿದ *Smart Train Acci Stop *ಎಂಬ ಮಾದರಿಗೆ ಕೇಂದ್ರ ಸರಕಾರದಿಂದ ತಲಾ *10,000 ರೂಪಾಯಿ ಪ್ರೋತ್ಸಾಹ ಧನ ಪಡೆದಿರುತ್ತಾರೆ.ಇವರಿಗೆ ಶಾಲಾ ವಿಜ್ಞಾನ ಶಿಕ್ಷಕಿ ಭುವನೇಶ್ವರಿ ಎಂ ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಮುಖ್ಯಗುರು ಪುಷ್ಪಾವತಿ ಎಸ್ ಪ್ರಕಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here