ಮಜಲುಮಾರು ಶ್ರೀ ಉಮಾಮಹೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

0

ಪುತ್ತೂರು:ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀಉಮಾಮಹೇಶ್ವರ ದೇವಸ್ಥಾನದಲ್ಲಿ ಏ.7-9ರ ತನಕ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವಕ್ಕೆ ಏ.1ರಂದು ಗೊನೆ ಮುಹೂರ್ತ ನೆರವೇರಿತು.


ಬೆಳಿಗ್ಗೆ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಸ್ಥಾನದ ಬಳಿಯಿರುವ ತೋಟದಲ್ಲಿ ಗೊನೆ ಕಡಿಯಲಾಯಿತು. ದೇವಸ್ಥಾನದ ಅರ್ಚಕ ಪ್ರಸಾದ್ ಅಡಿಗ ಅವರು ಗೊನೆ ಮುಹೂರ್ತ ನೆರವೇರಿಸಿದರು.

ಶ್ರೀಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿ ಕೆಮ್ಮಿಂಜೆ, ಉಪಾಧ್ಯಕ್ಷ ಕೆ.ಯಂ ಬೆಳಿಯಪ್ಪ ಗೌಡ, ಕಾರ್ಯದರ್ಶಿ ಕೇಶವ ಪೂಜಾರಿ ಮುಕ್ವೆ, ಕೋಶಾಧಿಕಾರಿ ನವೀನ್ ಕುಮಾರ್ ರೈ ಶಿಬರ, ಸದಸ್ಯರಾದ ಗಿರೀಶ್ ರೈ ಮಣಿಯ, ರವಿ ಮಣಿಯ, ಸುಧೀರ್ ಹೆಬ್ಬಾರ್, ಪದ್ಮನಾಭ ಪೂಜಾರಿ ಬೆದ್ರಾಳ, ರಾಘವೇಂದ್ರ ನಾಯಕ್, ಕೆಮ್ಮಿಂಜೆ ವಲಯ ಭಜನಾ ಪರಿಷತ್‌ನ ಅಧ್ಯಕ್ಷ ಸುಧಾಕರ ಕುಲಾಲ್ ನಡುವಾಲ್, ನರಿಮೊಗರು ಗ್ರಾ.ಪಂ ಮಾಜಿ ಸದಸ್ಯೆ ಮಲ್ಲಿಕಾ ಲತಾ ರೈ, ಶ್ರೀಉಮಾಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ರಘು ಮಣಿಯ, ಹರೀಶ್ ಕುಲಾಲ ನಡುವಾಲ್, ಲೋಕೇಶ್ ಗೌಡ ನೈತ್ತಾಡಿ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here