ಅರಣ್ಯ ವೀಕ್ಷಕ ರವಿ ಬಿ. ಅವರಿಗೆ ಬೀಳ್ಕೊಡುಗೆ

0

ಉಪ್ಪಿನಂಗಡಿ: ವಲಯದ ಅರಣ್ಯ ವೀಕ್ಷಕ ರವಿ ಬಿ. ಅವರು ಮಾ.31ರಂದು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ವಲಯ ಅರಣ್ಯ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು.


ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹೆಚ್.ಪಿ. ಅವರು ನಿವೃತ್ತರಾದ ರವಿ ಬಿ. ಅವರನ್ನು ಸನ್ಮಾನಿಸಿ, ಅವರ ಸೇವಾ ಅವಧಿಯ ಪರಿಶ್ರಮ, ನಿಷ್ಠೆ ಹಾಗೂ ಕರ್ತವ್ಯನಿಷ್ಠೆಯನ್ನು ಕೊಂಡಾಡಿದರು.


ಈ ವೇಳೆ ವಲಯದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿ, ನಿವೃತ್ತರಿಗೆ ಶುಭ ಹಾರೈಸಿ, ಅವರ ಮುಂದಿನ ಜೀವನವು ಆರೋಗ್ಯಕರ ಹಾಗೂ ಸಂತೋಷಕರವಾಗಿರಲೆಂದು ಹಾರೈಸಿದರು.

LEAVE A REPLY

Please enter your comment!
Please enter your name here