ಪುತ್ತೂರು – ಜಾವಗಲ್ ಬಸ್ಸಿಗೆ ನೆಲ್ಯಾಡಿಯಲ್ಲಿ ಸ್ವಾಗತ

0

ನೆಲ್ಯಾಡಿ: ಪುತ್ತೂರಿನಿಂದ ಜಾವಗಲ್ ಗೆ ಆರಂಭವಾಗಿರುವ ಕೆಎಸ್ ಆರ್ ಟಿಸಿ ಬಸ್ ಗೆ ಏ. 1ರಂದು ಬೆಳಿಗ್ಗೆ ನೆಲ್ಯಾಡಿ ಬಸ್ ನಿಲ್ದಾಣದಲ್ಲಿ ಸ್ವಾಗತ ಕೋರಲಾಯಿತು.

ಕೆಪಿಸಿಸಿ ಸದಸ್ಯ ಕೃಷ್ಣಪ್ಪ ರಾಮಕುಂಜ, ಜಿ ಪಂ ಮಾಜಿ ಸದಸ್ಯ ಸರ್ವೋತ್ತಮ ಗೌಡ, ದ ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಆದಂ ಕಾಜರೊಕ್ಕು, ನೆಲ್ಯಾಡಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಶುಕೂರ್ ಹಾಜಿ ಪುತ್ತೂರು, ಭೂ ನ್ಯಾಯ ಮಂಡಳಿ ಸದಸ್ಯ ಅಬ್ರಹಾಂ ಕೆ ಪಿ., ಸ್ಥಳೀಯ ಪ್ರಮುಖರಾದ ಚಾಕೋ ಇಂಜಿನಿಯರ್, ಸಲಾಂ ಬಿಲಾಲ್ ಪಡುಬೆಟ್ಟು, ಹನೀಫ್ ಕರಾವಳಿ, ಅಬ್ದುಲ್ ಜಬ್ಬಾರ್, ಉಷಾ ಜೋಯಿ, ಸಜಿ ಬ್ರೈಟ್, ಕುಶಾಲಪ್ಪ, ಶಿವಪ್ರಕಾಶ್, ಎಂ ಎಸ್.ಸುಲೈಮಾನ್ ಮತ್ತಿತರರು ಉಪಸ್ಥಿತರಿದ್ದರು. ಕೆಎಸ್ ಆರ್ ಟಿಸಿ ನಿವೃತ್ತ ಸಂಚಾರ ನಿಯಂತ್ರಕ ಅಬ್ಬಾಸ್ ಕೋಚಕಟ್ಟೆ ಸ್ವಾಗತಿಸಿ, ಪುತ್ತೂರಿನಿಂದ ಬೇಲೂರು ಹಳೇಬೀಡು ಮೂಲಕ ಜಾವಗಲ್ ಗೆ ಬಸ್ಸಿನ ವ್ಯವಸ್ಥೆ ಆಗಬೇಕು ಎಂಬ ಬೇಡಿಕೆ ಹಿಂದಿನಿಂದಲೇ ಇತ್ತು. ಈಗ ಶಾಸಕ ಅಶೋಕ್ ರೈ ಅವರ ಮುತುವರ್ಜಿಯಿಂದ ಬಸ್ ಓಡಾಟ ಆರಂಭವಾಗಿದೆ. ಅವರಿಗೆ ಜನತೆ ಪರವಾಗಿ ಧನ್ಯವಾದಗಳು ಎಂದರು.

LEAVE A REPLY

Please enter your comment!
Please enter your name here