






ಈಶ್ವರಮಂಗಲ: ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿಯಲ್ಲಿ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಏಪ್ರಿಲ್ 2ರ ಇಂದು ನಡೆಯುತ್ತಿದ್ದು, ಕಾರ್ಯಕ್ರಮವು ಬೆಳಿಗ್ಗೆ 8:30ಕ್ಕೆ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸ್ನಾನ, ಪೂಜೆ ಮತ್ತು ನಿತ್ಯಾನಂದ ಮಂದಿರದಲ್ಲಿ ಆರಂಭವಾಗಿದೆ. ಬೆಳಿಗ್ಗೆ 9:00ಕ್ಕೆ ಭಾಗವತ ಪ್ರಸನ್ನ ಪಾಠ ಹಾಗೂ ದೇವಸ್ಥಾನ ಪದ್ಧತಿ ನಡೆದು ಬಳಿಕ 10:00ಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದಲ್ಲಿ ಪೂಜೆ ನಡೆಯಲಿದ್ದು, 11:00ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಮುಂದುವರಿಯಲಿದೆ.



ಮಧ್ಯಾಹ್ನ 12:00ಕ್ಕೆ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪೂಜೆ, 1:30ಕ್ಕೆ ಅದ್ಯಾರು ಶ್ರೀ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ 2:30ಕ್ಕೆ ಶ್ರೀ ಆಂಜನೇಯ ದೇವಸ್ಥಾನ ವಿಜಯನಗರದಲ್ಲಿ ಪಂಗಸೇವೆಯೊಂದಿಗೆ ಕಾರ್ಯಕ್ರಮ ಮುಂದುವರಿಯಲಿದೆ.
ಸಂಜೆ 4:30ಕ್ಕೆ ಶ್ರೀ ರಕ್ಷೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದ್ದು, 6:00ಕ್ಕೆ ಶ್ರೀ ರಾಮ ಮಂದಿರದಲ್ಲಿ ಶೋಭಾಯಾತ್ರೆ ನಡೆಯಲಿದೆ. ರಾತ್ರಿ 7:00ಕ್ಕೆ ಕಾಲ ಶ್ರೀ ವಿರೂಪಾಕ್ಷೇಶ್ವರ ಭಜನ ಮಂದಿರದಲ್ಲಿ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ.
ಈ ಭವ್ಯ ರಥಯಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿದೆ.












