






ಪುತ್ತೂರು: ಪಮ್ಮಲೆ (ಪಡುಮಲೆ) ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾನುಭಾವರ ಹೆಸರಿನಲ್ಲಿ ನಡೆಸಿಕೊಂಡು ಬರುವ ವಾರ್ಷಿಕ ಆಂಡ್ ನೇರ್ಚೆ ಕಾರ್ಯಕ್ರಮವು ಎಪ್ರಿಲ್ 24 ರಿಂದ 26 ರತನಕ ನಡೆಯಲಿದೆ ಎಂದು ಜಮಾತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ರವರು ತಿಳಿಸಿದ್ದಾರೆ.


ಮೂರು ದಿನಗಳ ಕಾಲ ನಡೆಯುವ ಈ ಉರೂಸ್ ಕಾರ್ಯಕ್ರಮದಲ್ಲಿ ಪ್ರಸಿದ್ದ ಧಾರ್ಮಿಕ ವಿದ್ವಾಂಸರಿಂದ ಧಾರ್ಮಿಕ ಪ್ರವಚನ ನಡೆಯಲಿದ್ದು ,ಸಮಾರೋಪ ಸಮಾರಂಭವು ಕೊನೇಯ ದಿನದಂದು ನಡೆಯಲಿದ್ದು ಆ ದಿನ ಕೂಟು ಝಿಯಾರತ್ ಹಾಗೂ ಅನ್ನದಾನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಧಾರ್ಮಿಕ,ರಾಜಕೀಯ ಹಾಗೂ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ.












