







ಪುತ್ತೂರು: ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಏ.9ರಿಂದ 12ರ ತನಕ ನಡೆಯಲಿದ್ದು, ಇದರ ಅಂಗವಾಗಿ ಅಯೋಧ್ಯೆ ಯಿಂದ ಶ್ರೀರಾಮ ಜ್ಯೋತಿ, ಮೂಲ ಮೃತ್ತಿಕೆ, ಪ್ರಯಾಗರಾಜ್ನ ತ್ರಿವೇಣಿ ಸಂಗಮದಿಂದ ಗಂಗಾಜಲ ಪಡೆದು, ಅಂಜನಾದ್ರಿಯಿಂದ ಹನುಮ ಜ್ಯೋತಿ, ಮೃತ್ತಿಕೆ ಹಾಗು ಪಂಪಾಸರೋವರದ ಪವಿತ್ರ ಜಲ ಸಂಗ್ರಹಿಸಿಕೊಂಡು ಹೊರಟ ಶ್ರೀರಾಮಹನುಮ ರಾಮರಥವು ಏ.3ರಂದು ಪುತ್ತೂರು ಪುರ ಪ್ರವೇಶ ಮಾಡಿದ ಸಂದರ್ಭ ಭವ್ಯ ಸ್ವಾಗತ ನೀಡಲಾಯಿತು.






ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮತ್ತು ಕೋಟಿ ಶ್ರೀರಾಮ ತಾರಕ ಜಪ ಯಜ್ಞದ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

ಬೊಳುವಾರಿನಲ್ಲಿ ಅದ್ದೂರಿಯ ಮೆರವಣಿಗೆಗೆ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ,ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ‘ಸಹಕಾರ ರತ್ನ’ ಕೆ.ಸೀತಾರಾಮ ರೈ ಸವಣೂರು ಚಾಲನೆ ನೀಡಿ,ಮೆರವಣಿಗೆ ನೇತೃತ್ವ ವಹಿಸಿದ್ದ ಸೀತಾರಾಮ ರೈ ಕೆದಂಬಾಡಿಗುತ್ತು ಅವರಿಗೆ ಭಗವಧ್ವಜವನ್ನು ಹಸ್ತಾಂತರಿಸಿದರು.ಮೆರವಣಿಗೆಯ ಪ್ರಾರಂಭದಲ್ಲಿ ಭಗವಧ್ವಜ ಹಿಡಿದ ಸುಮಂಗಲೆಯರು ಮಕ್ಕಳು, ಜೊತೆಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ಮಾಡಿದರು.ಚೆಂಡೆ ಸದ್ದು, ವಾದ್ಯಗೋಷ,ವಿವಿಧ ಭಜನಾ ಮಂಡಳಿಗಳಿಂದ ಕುಣಿತ ಭಜನೆ ವಿಶೇಷ ಆಕರ್ಷಣೆಯಾಗಿತ್ತು.

ಕಲ್ಲೇಗದಲ್ಲಿ ಭವ್ಯ ಸ್ವಾಗತ:
ಮಾಣಿ ಮಠದಿಂದ ಹೊರಟ ರಥ ವಿವಿಧ ಕಡೆಗಳಿಗೆ ತೆರಳಿ ಪುತ್ತೂರು ಪುರಪ್ರವೇಶ ಮಾಡಿದಾಗ ಕಲ್ಲೇಗದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಅವರು ರಥಕ್ಕೆ ಪುಷ್ಪಾರ್ಚನೆ ಮಾಡಿ ರಥದಿಂದ ಬೆಳಗಿಸಿದ ಜ್ಯೋತಿಯನ್ನು ಕಲ್ಲೇಗ ಶ್ರೀ ಮಹಾಲಿಂಗೇಶ್ವರ ಕಟ್ಟೆಯಲ್ಲಿ ಇರಿಸಲಾಯಿತು.ಅಲ್ಲಿಂದ ಮನೆ ಮನೆಗೆ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನಡೆಯಿತು.ಈ ಸಂದರ್ಭ ಕಲ್ಲೇಗ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ನ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಸದಸ್ಯರಾದ ಮಾಧವ ಪಟ್ಲ, ಜೀವಂಧರ್ ಜೈನ್, ವಿನಯ ಕಲ್ಲೇಗ, ಶಿವಾಜಿ ಯುವಕ ಮಂಡಲ ಮತ್ತು ಶ್ರೀ ದೇವಿ ಭಜನಾ ಮಂಡಳಿಯ ಪದಾಽಕಾರಿಗಳು, ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಜೊತೆಗಿದ್ದರು.

ಬೊಳುವಾರಿನಲ್ಲಿ ಆರತಿ ಬೆಳಗಿಸಿ ಸ್ವಾಗತ:
ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಟಿ.ರಂಗನಾಥ ರಾವ್ ಅವರು ಆರತಿ ಬೆಳಗಿಸಿ ರಥದಿಂದ ಪ್ರಜ್ವಲಿಸಿದ ಜ್ಯೋತಿಯನ್ನು ಮಂತ್ರಾಲಯದಲ್ಲಿ ಬೆಳಗಿಸಿದರು.ಬಳಿಕ ಸವಣೂರು ಸೀತಾರಾಮ ರೈ ಅವರು ಶ್ರೀರಾಮನ ರಥಕ್ಕೆ ಹಾರಾರ್ಪಣೆ ಮಾಡಿ ಭಗವಧ್ವಜವನ್ನು ಸೀತಾರಾಮ ರೈ ಕೆದಂಬಾಡಿಗುತ್ತು ಅವರಿಗೆ ಹಸ್ತಾಂತರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆರತಿ ಬೆಳಗಿಸಿ ಸ್ವಾಗತ: ಬೊಳುವಾರಿನಿಂದ ಚಾಲನೆಗೊಂಡ ಮೆರವಣಿಗೆಯು ಮುಖ್ಯರಸ್ತೆಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದ ಬಳಿ ಸಮಾವೇಶಗೊಂಡಿತ್ತು.ಅಲ್ಲಿ ಅರ್ಚಕರು ರಥಕ್ಕೆ ಆರತಿ ಬೆಳಗಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ ಬೆಡೇಕರ್ ಮತ್ತು ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರಿಗೆ ರಥದಿಂದ ಜ್ಯೋತಿ ಹಸ್ತಾಂತರಿಸಲಾಯಿತು.ಇದೇ ವೇಳೆ ಬ್ರಹ್ಮನಗರ ಮಾರಿಯಮ್ಮ ದೇವಸ್ಥಾನ ಮತ್ತು ಶ್ರೀ ಮಹಾಲಕ್ಷ್ಮೀ ದೇವಿ ಬೆಟ್ಟಕ್ಕೆ ಜ್ಯೋತಿಯನ್ನು ಕೊಂಡೊಯ್ಯಲಾಯಿತು.ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ನಾವೆಲ್ಲ ಪಾಲ್ಗೊಳ್ಳಬೇಕು:
ಮೆರವಣಿಗೆಗೆ ಚಾಲನೆ ನೀಡಿದ ಸವಣೂರು ಸೀತಾರಾಮ ರೈ ಅವರು ಮಾತನಾಡಿ,ಹನುಮಗಿರಿ ಬ್ರಹ್ಮಕಲಶೋತ್ಸವದಲ್ಲಿ ಯಾವ ಭೇದಭಾವವಿಲ್ಲ.ಎಲ್ಲಾ ಪಕ್ಷದವರು ಜೊತೆಯಾಗಿ ಈ ರಥಯಾತ್ರೆಯನ್ನು ಮತ್ತು ನಾಳಿದ್ದು ನಡೆಯುವ ಬ್ರಹ್ಮಕಲಶೋತ್ಸವ ನೆರವೇರಿಸಲಿದ್ದಾರೆ.ಇದರ ಜೊತೆಗೆ ದೇಶದ ಪ್ರಮುಖ ಸ್ವಾಮೀಜಿಯವರು ಕ್ಷೇತ್ರಕ್ಕೆ ಆಗಮಿಸುವುದು ವಿಶೇಷ ಒಂದು ಕಡೆಯಾದರೆ ದೈವ ನರ್ತಕ ಡಾ|ರವೀಶ್ ಪಡುಮಲೆ ಅವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವುದು ಮತ್ತೊಂದು ವಿಶೇಷ.ಈ ಮೂರು ನಾಲ್ಕು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡರೆ ಹನುಮಗಿರಿಯ ಕಾರ್ಯಕ್ರಮ ಏನು, ಯಾವ ರೀತಿ ಮುಂದೆ ಹೋಗಬಹುದು ಎಂದು ತಿಳಿದುಕೊಳ್ಳಬಹುದು.ಹಾಗಾಗಿ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ನಾವೆಲ್ಲ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಏ. 8ಕ್ಕೆ ಪುತ್ತೂರಿನಿಂದ ಹೊರೆಕಾಣಿಕೆ ಮೆರವಣಿಗೆ:
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮತ್ತು ಕೋಟಿ ಶ್ರೀರಾಮ ತಾರಕ ಜಪ ಯಜ್ಞದ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಮಾತನಾಡಿ, ಅಯೋಧ್ಯೆ ಮತ್ತು ಅಂಜನಾದ್ರಿಯಿಂದ ಹೊರಟ ರಥ ಇವತ್ತು ಪುತ್ತೂರಿನ ಮಣ್ಣಿಗೆ ಕಾಲಿಟ್ಟಿದೆ.ಈ ರಥಯಾತ್ರೆಯನ್ನು ಬಹಳ ಪ್ರೀತಿಯಿಂದ ನಾವೆಲ್ಲ ಸ್ವಾಗತಿಸಿದ್ದೇವೆ.ಕೇವಲ ಎರಡು ದಿನದಲ್ಲಿ ಜೋಡಿಸಿಕೊಂಡ ಕಾರ್ಯಕ್ರಮದಲ್ಲಿ ಇಷ್ಟೊಂದು ಭಕ್ತರು ಸೇರುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿರುವುದು ಸಂತೋಷ ಆಗಿದೆ.ಮುಂದೆ ಏ.೮ಕ್ಕೆ ಭವ್ಯ ಹೊರೆಕಾಣಿಕೆ ಮೆರವಣಿಗೆಯೂ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪುಣ್ಯ ಮಣ್ಣಿನಿಂದ ಹೊರಡಲಿದೆ ಎಂದು ಹೇಳಿ,ಏ.೯ರಿಂದ ೧೨ರ ತನಕ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ಹಾಗು ಕೋಟಿ ಶ್ರೀರಾಮ ತಾರಕ ಜಪ ಯಜ್ಞದಲ್ಲೂ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.
ಇದೊಂದು ಪುಣ್ಯದ ಕಾರ್ಯ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ನ ಪ್ರಧಾನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಬ್ರಹ್ಮಕಲಶೋತ್ಸವದಲ್ಲಿ ಗಂಗೆ ಮತ್ತು ಸರಯೂ ನದಿಯ ತೀರ್ಥವನ್ನು ತಂದು ಬ್ರಹ್ಮಕಲಶ ಮಾಡುವ ಉದ್ದೇಶವಿಟ್ಟ ಕಾರ್ಯ ಖಂಡಿತವಾಗಿಯೂ ಅತ್ಯಂತ ಪುಣ್ಯ ಕಾರ್ಯ ಎಂದರು.
ರಾಷ್ಟ್ರಮಂದಿರದಿಂದ ಬಂದ ಜ್ಯೋತಿ ಮನೆ ಮನೆ ಬೆಳಗಬೇಕು: ರಾಮ ಹನುಮ ಜ್ಯೋತಿ ರಥಯಾತ್ರೆ ಸಮಿತಿ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ 14 ದಿನಗಳ ರಥಯಾತ್ರೆಯಲ್ಲಿ ಏ.4ರಂದು ಬೆಳಿಗ್ಗೆ ಮಹಾಲಿಂಗೇಶ್ವರ ದೇವಸ್ಥಾನದಿಂದ ರಥ ಹೊರಟು ಬನ್ನೂರು ಬಲಮುರಿ ಗಣಪತಿ ದೇವಸ್ಥಾನ, ನೆಲಪ್ಪಾಲು ವೀರಾಂಜನೇಯ ಕ್ಷೇತ್ರ, ಕೊಡಿಪ್ಪಾಡಿ ಜನಾರ್ದನ ದೇವಸ್ಥಾನ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ, ವನಶಾಸ್ತ ಕಟ್ಟೆಯ ಮೂಲಕ ವಿಟ್ಲ ಕುಂಡಡ್ಕಕ್ಕೆ ಸಾಗಲಿದೆ.ಈ ಜ್ಯೋತಿ ಮನೆ ಮನೆಗೆ ತೆರಳಬೇಕೆಂಬ ಸಂಕಲ್ಪಕ್ಕೆ ಎಲ್ಲರೂ ಕೈಜೋಡಿಸಬೇಕು.ರಾಷ್ಟ್ರಮಂದಿರದಿಂದ ಬಂದ ಜ್ಯೋತಿ ಮನೆ ಮನೆಯಲ್ಲಿ ಬೆಳಗಬೇಕು ಎಂದರು.ಹನುಮಗಿರಿ ಬ್ರಹ್ಮಕಲಶೋತ್ಸವ ಪುತ್ತೂರು ನಗರ ಸಮಿತಿ ಅಧ್ಯಕ್ಷ ಲೋಕೇಶ್ ಹೆಗ್ಡೆ ಸ್ವಾಗತಿಸಿದರು.ಲಕ್ಷೋತ್ತರ ನಾರಿಕೇಳ ಸಮರ್ಪಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಮೆರವಣಿಗೆಯಲ್ಲಿ ಪ್ರಮುಖ ಉಸ್ತುವಾರಿಗಳಾದ ಸತೀಶ್ ನಾಕ್ ಪರ್ಲಡ್ಕ, ಇಂದುಶೇಖರ, ದಿನೇಶ್ ಪಂಜಿಗ, ಡಾ. ಕೃಷ್ಣಪ್ರಸನ್ನ, ಪುರುಷೋತ್ತಮ ಕೋಲ್ಪೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮತ್ತು ಹಸಿರು ಹೊರೆಕಾಣಿಕೆ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು,ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ರವಿಕಿರಣ್ ಶೆಟ್ಟಿ ಬೆದ್ರಾಡಿ, ನಾಗಪ್ಪ ಗೌಡ ಬೊಮ್ಮೆಟ್ಟಿ, ಡಾ.ಸುರೇಶ್ ಪುತ್ತೂರಾಯ, ಭಾಮಿ ಅಶೋಕ್ ಶೆಣೈ, ರಾಜೇಶ್ ಬನ್ನೂರು, ಸುಂದರ ಪೂಜಾರಿ ಬಡಾವು, ಗೋಪಾಲಕೃಷ್ಣ ಹೇರಳೆ, ಚನಿಲ ತಿಮ್ಮಪ್ಪ ಶೆಟ್ಟಿ, ಹರೀಶ್ ದೋಳ್ಪಾಡಿ, ರಾಧಾಕೃಷ್ಣ ನಂದಿಲ, ಜಯಂತ್ ಕುಂಜೂರುಪಂಜ, ಶೇಷಪ್ಪ ಬೆಳ್ಳಿಪ್ಪಾಡಿ, ಹರೀಶ್ ಅಚಾರ್ಯ, ಶ್ರೀಧರ ಪಟ್ಲ,ವಿಶ್ವನಾಥ ಗೌಡ ಬನ್ನೂರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಽಕಾರಿ ಶಶಿಧರ್, ಅಜಿತ್ ರೈ ಹೊಸಮನೆ, ಜನಾರ್ದನ ಬೆಟ್ಟ, ಕೃಷ್ಣಪ್ರಸಾದ್ ಬೆಟ್ಟ, ವಿದ್ಯಾಧರ ಜೈನ್, ಅಶೋಕ್ ಬಲ್ನಾಡು, ಕಿರಣ್ ಬಲ್ನಾಡು, ಪ್ರಕಾಶ್ ಬಲ್ನಾಡು, ಶಶಿಧರ್ ನಾಯಕ್, ಯುವರಾಜ್ ಪೆರಿಯತ್ತೋಡಿ, ರಾಘವೇಂದ್ರ ಪ್ರಭು ಕಲ್ಲೇಗ, ಚಂದ್ರಶೇಖರ್ ಆಳ್ವ, ಮಹಿಳಾ ಸಮಿತಿ ಪ್ರಮುಖರಾದ ವಿದ್ಯಾ ಗೌರಿ, ಜಯಂತಿ ನಾಯಕ್, ಸ್ವರ್ಣಲತಾ ಹೆಗ್ಡೆ, ಗೌರಿ ಬನ್ನೂರು, ಜಯಶ್ರೀ ಎಸ್ ಶೆಟ್ಟಿ, ಪ್ರೇಮಲತಾ ರಾವ್, ಪ್ರೇಮಲತಾ ನಂದಿಲ, ದೀಕ್ಷಾ ಪೈ, ನಯನಾ ರೈ ಸಹಿತ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಏ.3ರಂದು ರಥವು ಮಾಣಿಯಿಂದ ಹೊರಟು ಕರ್ವೇಲ್, ಪೇರಮೊಗರು, ಕೆದಿಲ, ಕುಂಜಾರು ಕೋಲ್ಪೆ, ಧರ್ಮನಗರ ಕಂಬಳಬೆಟ್ಟು, ಅಳಿಕೆಮಜಲು, ಕಬಕ ಮಹಾದೇವಿ ಭಜನಾ ಮಂದಿರ, ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನವಾಗಿ ಕಲ್ಲೇಗ ದೈವಸ್ಥಾನಕ್ಕೆ ಆಗಮಿಸಿತು. ಏ.4ರಂದು ಕೊಡಿಪ್ಪಾಡಿ, ಬಲ್ನಾಡು, ಕುಂಡಡ್ಕ, ವಿಟ್ಲ ಸಹಿತ ಹಲವಾರು ಕಡೆಗಳಿಗೆ ತೆರಳಲಿದೆ.










