







ರಾಮಕುಂಜ: ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್ಟಿ)ಯ ಜಿಲ್ಲಾಮಟ್ಟದ ಇನ್ಸ್ಪೈರ್ ಅವಾರ್ಡ್ಗೆ ರಾಮಕುಂಜ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲಾ ೭ನೇ ತರಗತಿ ವಿದ್ಯಾರ್ಥಿನಿ ಜಿಶ್ಮಿತ ವಿ.ಎಸ್.ಆಯ್ಕೆಯಾಗಿದ್ದಾರೆ.


ಇವರು ಸಿದ್ಧಪಡಿಸಿರುವ ಸ್ವಯಂಚಾಲಿತ ನೀರಿನ ಟ್ಯಾಂಕ್ ಮಾದರಿ ಇನ್ಸ್ಪೈರ್ ಅವಾರ್ಡ್ಗೆ ಆಯ್ಕೆಯಾಗಿದೆ. ಇವರಿಗೆ ಶಾಲಾ ಮುಖ್ಯಶಿಕ್ಷಕಿ ಸುಶೀಲ ಹಾಗೂ ವಿಜ್ಞಾನ ಶಿಕ್ಷಕಿ ನಿರ್ಮಲಾದೇವಿ ಅವರು ಮಾರ್ಗದರ್ಶನ ನೀಡಿದ್ದರು. ಈಕೆ ರಾಮಕುಂಜ ಗ್ರಾಮದ ಸಂಪ್ಯಾಡಿ ನಿವಾಸಿ ಎಸ್.ವಾಸಪ್ಪ ಹಾಗೂ ಕುಸುಮ ದಂಪತಿಯ ಪುತ್ರಿ.













