ಸಂಪನ್ನಗೊಂಡ ಉಚಿತ ಸಂಸ್ಕಾರ ಬೇಸಿಗೆ ಶಿಬಿರ “ಮಕ್ಕಳ ಕಲರವ”- ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ

0

ಪುತ್ತೂರು: ದೇವಾಲಯ ಸಂವರ್ಧನಾ ಸಮಿತಿ, ಪುತ್ತೂರಿನ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ವತಿಯಿಂದ, ಪಾಂಗಳಾಯಿ ಅರಸು ಮುಂಡ್ಯತ್ತಾಯ ಇದರ ವಠಾರದಲ್ಲಿ ನಡೆದ ಎರಡನೇ ದಿನದ ‘ಮಕ್ಕಳ ಕಲರವ’ ಬೇಸಿಗೆ ಶಿಬಿರವು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಬೋಧಕರಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಡಾ. ವಿಜಯ ಸರಸ್ವತಿ, ಪ್ರಭಾವತಿ, ಶಂಕರಿ ಶರ್ಮ, ಶರಾವತಿ ರವಿನಾರಾಯಣ, ವಿದ್ಯಾ ಕಿಣಿ ಉಮಾ ಡಿ ಪ್ರಸನ್ನ ಹಾಗೂ ನಿರ್ವಾಹಕರಾಗಿ ಪ್ರತಿಮಾ ಸಂಪತ್, ರಶ್ಮಿ ಉಮಾಶಂಕರ್ ಮತ್ತು ವಿನುತ ಪಾಂಗಳಾಯಿ, ಕ್ಷಮಾ ಸಂತೋಷ್ ಮುಂತಾದವರು ಸಹಕರಿಸಿದರು. ಧ್ಯಾನ ಹಾಗೂ ಸರಳ ಯೋಗ, ತೆಂಗಿನ ಗರಿಯಿಂದ ಪೊರಕೆ ಹಾಗೂ ಕರಕುಶಲ ವಸ್ತುಗಳು, ಮಕ್ಕಳಿಂದ ಸರಳವಾಗಿ ಶಾರದಾ ಪೂಜೆ, ದಿನನಿತ್ಯ ಪಠಿಸುವ ಶ್ಲೋಕಗಳು, ಹೂ ಕಟ್ಟುವುದು, ಗಂಧ ತೇಯುವುದು, ಸಾಂಪ್ರದಾಯಿಕ ಜಾನಪದ ಆಟಗಳಾದ ಕುಂಟೆಬಿಲ್ಲೆ, ಲಗೋರಿ, ಚೆನ್ನೆಮಣೆ ಇತ್ಯಾದಿಗಳನ್ನು ಎಲ್ಲರು ಸೇರಿ ನಡೆಸಿಕೊಟ್ಟರು. ಸುಮಾರು 185ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡ ಎರಡನೇ ದಿನದ ಶಿಬಿರವು ಅತ್ಯಂತ ಸಂಭ್ರಮದಿಂದ ನಡೆಯಿತು.

ಮೂರನೆಯ ದಿನದ ಶಿಬಿರದಲ್ಲಿ ಬೋಧಕರಾಗಿ ವತ್ಸಲಾ ರಾಜ್ಞಿ, ಕೃಷ್ಣವೇಣಿ ಪ್ರಸಾದ್ ಮುಳಿಯ, ಪ್ರಭಾವತಿ, ಸುಧಾ ಹೆಬ್ಬಾರ್, ಗೋವಿನ ಮಹತ್ವ ದ ಬಗ್ಗೆ ಮಾಹಿತಿ ಕ್ಷಮಾ ಸಂತೋಷ್ ಹಾಗೂ ನಿರ್ವಾಹಕರಾಗಿ ಪ್ರತಿಮಾ ಸಂಪತ್, ರಶ್ಮಿ ಉಮಾನಾಥ್ ಮತ್ತು ವಿನುತ ಪಾಂಗಳಾಯಿ, ಕ್ಷಮಾ ಸಂತೋಷ್ ಮುಂತಾದವರು ಸಹಕರಿಸಿದರು. ಯೋಗ,ಧ್ಯಾನ, ಕಥೆ, ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆರತಿ ಬೆಳಗಿ ಅದರ ಕುರಿತಾದ ಶ್ಲೋಕ ಹೇಳಿ, ಮೊಸರು ಕಡೆದು ಬೆಣ್ಣೆ ತೆಗೆಯುವ ಪ್ರಾತ್ಯಕ್ಷಿಕೆ, ಗೋಪೂಜೆ ಪ್ರಾತ್ಯಕ್ಷಿಕೆ, ಭಜನೆ, ಕುಣಿತ ಭಜನೆ, ಕಥೆ, ನವಗ್ರಹಗಳಿಗೆ ಸಂಬಂಧಿಸಿದ ಧಾನ್ಯಗಳ ಪರಿಚಯ,ಬತ್ತಿ ಹೊಸೆಯುವುದು ಇತ್ಯಾದಿಗಳನ್ನು ಎಲ್ಲರು ಸೇರಿ ನಡೆಸಿಕೊಟ್ಟರು. ಸುಮಾರು ಈ ದಿನವು 185ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡ ಮೂರನೇ ದಿನದ ಶಿಬಿರವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಪೋಷಕರೇ, ಈ ಶಿಬಿರದ ನಮ್ಮ ಮೂಲ ಉದ್ದೇಶ ಸನಾತನ ಧರ್ಮದ ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವುದರೊಂದಿಗೆ, ನಮ್ಮ ಧರ್ಮದ ಮಹತ್ವವನ್ನು ಬಾಲ್ಯದಿಂದಲೇ ಮಕ್ಕಳಿಗೆ ಅರಿವು ಮೂಡಿಸುವುದು. ಈ ನಿಟ್ಟಿನಲ್ಲಿ ತಾವೆಲ್ಲರೂ ನಮ್ಮೊಂದಿಗೆ, ಕೈ ಜೋಡಿಸಿ ನಿಮ್ಮ ಮನೆಗೆ
ಹತ್ತಿರವಿರುವ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ನಿಮ್ಮ ಮಕ್ಕಳನ್ನು ಸೇರಿಸಿ. ಧರ್ಮ ಜಾಗೃತಿಯನ್ನು ಮೂಡಿಸೋಣ. ಆಸಕ್ತರು ನಿಮ್ಮ ಊರಲ್ಲಿ ಪ್ರಾರಂಬಿಸುವ ನೆಲೆಯಲ್ಲೂ ನಮ್ಮನ್ನು ಸಂಪರ್ಕ ಮಾಡಬಹುದು.
ಸಂಪರ್ಕಿಸಬೇಕಾದ ಸಂಖ್ಯೆ : 9035888916

ದಿನ – 1, 02.04.2026
ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ
ದೇವಾಲಯ ಸಂವರ್ಧನಾ ಸಮಿತಿ
ಉಚಿತ ಬೇಸಿಗೆ ಸಂಸ್ಕಾರ ಶಿಬಿರ
ಸ್ಥಳ : ಅರಸು ಮುಂಡ್ಯತ್ತಾಯ ದೈವಸ್ಥಾನ ಪಾಂಗ್ಲಾಯಿ

ದಿನ – 2, 03.04.2026
ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ
ದೇವಾಲಯ ಸಂವರ್ಧನಾ ಸಮಿತಿ
ಉಚಿತ ಬೇಸಿಗೆ ಸಂಸ್ಕಾರ ಶಿಬಿರ
ಸ್ಥಳ : ಅರಸು ಮುಂಡ್ಯತ್ತಾಯ ದೈವಸ್ಥಾನ ಪಾಂಗ್ಲಾಯಿ

ದಿನ – 3, 03.04.2026
ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ
ದೇವಾಲಯ ಸಂವರ್ಧನಾ ಸಮಿತಿ
ಉಚಿತ ಬೇಸಿಗೆ ಸಂಸ್ಕಾರ ಶಿಬಿರ
ಸ್ಥಳ: ಅರಸು ಮುಂಡ್ಯತ್ತಾಯ ದೈವಸ್ಥಾನ ಪಾಂಗ್ಲಾಯಿ

LEAVE A REPLY

Please enter your comment!
Please enter your name here