






ಪುತ್ತೂರು: ಶತಮಾನೋತ್ಸವ ಆಚರಿಸುತ್ತಿರುವ ಬೆಟ್ಟಂಪಾಡಿ ಹಿರಿಯ ಪ್ರಾಥಮಿಕ ಶಾಲೆಗೆ ಮಣಿಪಾಲ್ ಫೌಂಡೇಶನ್ ಟ್ರಸ್ಟ್ ವತಿಯಿಂದ ನೀಡಲಾದ ಒಂದು ಲಕ್ಷ ರೂ. ಆರ್ಥಿಕ ಸಹಕಾರ ಹಾಗೂ ಪ್ರತಿ ತಿಂಗಳಿಗೆ 10,000 ರೂ.ಗಳಂತೆ ಒಬ್ಬ ಶಿಕ್ಷಕರ ವೇತನದ ಸೌಲಭ್ಯವನ್ನು ಶಾಲಾ ಹಿರಿಯ ವಿದ್ಯಾರ್ಥಿ, ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿರುವ ವಸಂತಕೃಷ್ಣ ಕೋನಡ್ಕರವರು ಶಾಲೆಗೆ ಹಸ್ತಾಂತರಿಸಿದರು.


ಅಕ್ಷರ ಶತ ಸಂಧ್ಯೆ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶರೀಫ್ ಎನ್., ಉಪಾಧ್ಯಕ್ಷೆ ಸೌಮ್ಯಶ್ರೀ ವಿ, ಟ್ರಸ್ಟ್ ಉಪಾಧ್ಯಕ್ಷ ಪ್ರಭಾಕರ ರೈ ಬಾಜುವಳ್ಳಿ, ಕೋಶಾಧಿಕಾರಿ ಹಮೀದ್ ಕೊಮ್ಮೆಮಾರು, ಪೋಷಕರಾದ ಶೇಷನ್ ಪಾರ, ಹಾಗೂ ತಿಮ್ಮಪ್ಪ ಶೆಟ್ಟಿರವರು ಉಪಸ್ಥಿತರಿದ್ದರು. ಆರ್ಥಿಕ ಸಹಕಾರಕ್ಕೆ ಶ್ರಮಿಸಿದ ವಸಂತಕೃಷ್ಣ ಕೋನಡ್ಕರವರಿಗೆ ಶಾಲೆಯ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.













