






ಕಡಬ: ಐತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ಅಂತಿಬೆಟ್ಟು ಪ್ರದೇಶದಲ್ಲಿ ಸುಮಾರು ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕಟ್ಟಡವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಕೆ.ವೈ. ಕುಸುಮ, ಎ.ಪಿ.ಎಂ.ಸಿ ಮಾಜಿ ಸದಸ್ಯರಾದ ಮೇದಪ್ಪ ಗೌಡ ಡೆಪ್ರಣಿ, ಸಿ.ಡಿ.ಪಿ.ಒ ಹರೀಶ್ ಕೆ.ಶಿರಾಡಿ ವಲಯ ಮೇಲ್ವಿಚಾರಕಿ ಪುಪ್ಪಾವತಿ, ಹಿರಿಯರಾದ ಪೂವಪ್ಪ ಗೌಡ, ಶ್ರೀದೇವಪ್ಪ ಗೌಡ ಹೊಸಕ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಗೀತಾ ಪೂವಪ್ಪ ಗೌಡ ವಹಿಸಿದ್ದರು. ಪಂಚಾಯತ್ ಮಾಜಿ ಸದಸ್ಯರಾದ ಈರೇಶ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಗನವಾಡಿ ಕಟ್ಟಡದ ಅಗತ್ಯತೆ ಮತ್ತು ಅದರ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅಶ್ವಿನಿ ವರದಿ ವಾಚಿಸಿದರು. ದುಗ್ಗಪ್ಪ ಗೌಡ ಅಂತಿಬೆಟ್ಟು ಸ್ವಾಗತಿಸಿದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಲಿಂಗಮ್ಮ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮವನ್ನು ಪೂವಪ್ಪ ಗೌಡ ಅಂತಿಬೆಟ್ಟು ನಿರೂಪಿಸಿದರು.
ಈ ಸಂದರ್ಭದಲ್ಲಿ ಮರ್ದಾಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜನಾರ್ಧನ ಗೌಡ ಪುತ್ತಿಲ ಹರೀಶ್ ಕೊಡಂದೂರು, ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ವಸಂತಿ, ಐತ್ತೂರು ಗ್ರಾಮಪಂಚಾಯತ್ ಮಾಜಿ ಉಪಾಧ್ಯಕ್ಷೆ ಜಯಲಕ್ಷ್ಮೀ, ಅಂಗನವಾಡಿ ಸಹಾಯಕಿ ಯಮುನಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಅಂಗನವಾಡಿ ಕೇಂದ್ರದ ನಿರ್ಮಾಣ ಕಾರ್ಯದಲ್ಲಿ ಆರಂಭದಿಂದಲೇ ಸಹಕರಿಸಿದ ಜಯಪ್ರಕಾಶ್ ಮತ್ತು ಈರೇಶ ಗೌಡ ಅವರನ್ನು ಊರವರಿಂದ ಸನ್ಮಾನಿಸಲಾಯಿತು. ನಿರ್ಮಾಣದ ವಿವಿಧ ಹಂತಗಳಲ್ಲಿ ಶ್ರಮದಾನದ ಮೂಲಕ ಸಹಕರಿಸಿದವರಿಗೆ ಹೂ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.










