ಪದ್ಯಾಣ ಬ್ರಹ್ಮಕಲಶೋತ್ಸವ : ಪದ್ಯಾಣದ ಕಲಾಲಯದಿಂದ ಶಿವಾಲಯ ಪುನರುತ್ಥಾನ – ಒಡಿಯೂರು ಶ್ರೀ

0

ಪುತ್ತೂರು : ಕಲಾಲಯದೊಳಗೆ ಒಂದು ಶಿವಾಲಯವಾಗಿದೆ. ಬ್ರಹ್ಮಕಲಶೋತ್ಸವದಿಂದ ಸಮನ್ವಯವಾಗಿದೆ. ನಿಜವಾದ ಸಂಗಮವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.


ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸೋಮವಾರ ರಾತ್ರಿ ನಡೆದ ಸುಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.


ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಸಕಾರಾತ್ಮಕ ವಿಚಾರಗಳನ್ನು ನೀಡುವ ಕಾರ್ಯ ಆಗಬೇಕು. ಪದ್ಯಾಣದಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಿಸುವ ಕೆಲಸ. ಕಲಾಲಯದೊಳಗೆ ಒಂದು ಶಿವಾಲಯವಾಗಿದೆ. ಬ್ರಹ್ಮಕಲಶೋತ್ಸವದಿಂದ ಸಮನ್ವಯವಾಗಿದೆ. ನಿಜವಾದ ಸಂಗಮವಾಗಿದೆ ಎಂದರು.
ಕೊಂಡೆವೂರು ನಿತ್ಯಾನಂದ ಆಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ದೇವಸ್ಥಾನದ ರಕ್ಣಣೆ ಅಗತ್ಯವನ್ನು ಒತ್ತಿ ಹೇಳಿ, ಹಿಂದು ಸಂಸ್ಕೃತಿ ಹೊಣೆಯರಿತು ಕೆಲಸ ಮಾಡಬೇಕು. ಮುಂದಿನ ಸಮಾಜವನ್ನು ಸದೃಢವಾಗಿ ಕಟ್ಟಿಕೊಳ್ಳಬೇಕು ಎಂದರು.


ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಹಿಂದು ಸಮಾಜ ಜಾತಿ, ಜಾತಿಗಳ ವೈರುಧ್ಯ ಮೀರಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದರು. ಹಿಂದು ಸಮಾಜ ಸ್ವಾರ್ಥ ಕಳೆದುಕೊಳ್ಳಬೇಕು ಎಂದ ಅವರು, ನಮ್ಮ ಮುಂದಿನ ಪೀಳಿಗೆಗೆ ಭಾರತವನ್ನು ಉಳಿಸಿಕೊಳ್ಳಬೇಕು. ಮೈಮುರಿದು ದುಡಿದ ಮೇಲೆಯೇ ಶಿವನ ದರ್ಶನ ಆಗುತ್ತದೆ. ನಾವು ನೋಡುವ ಪರಬ್ರಹ್ಮನ ದರ್ಶನ ಮಾಡಿಸುವುದು ಶಿವಲಿಂಗ ಎಂದರು.


ಭಾರತದ ಪರ್ವಕಾಲವಿದು, ಗುಪ್ತರ ಕಾಲದ ನಂತರ ಭಾರತ ಉತ್ತಮ ಕಾಲಘಟ್ಟದಲ್ಲಿ ಇದೆ. ನಾವು ದೇವಸ್ಥಾನಕ್ಕೆ ಯಾಕೆ ಹೋಗಬೇಕು ಎಂದರೆ, ಅಲ್ಲಿ ಪ್ರಭಾವ ಇರುತ್ತದೆ ಎಂದ ಅವರು, ತಂದೆ ತಾಯಿ ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಬರಬೇಕು. ಭಗವಂತನೊಂದಿಗೆ ಅನುಸಂಧಾನ ಮಾಡಿಕೊಳ್ಳಲು ದೇವಸ್ಥಾನ ಬೇಕು. ನಮ್ಮ ಧಾರ್ಮಿಕ ಕಾರ್ಯಕ್ರಮಕ್ಕೆ ತಂದೆ ತಾಯಿ ಮಾತ್ರ ಬರ್ತಾರೆ. ದೇವಸ್ಥಾನಕ್ಕೆ ಜನರನ್ನು ಜೋಡಿಸಿಕೊಳ್ಳುವುದು ಭಾರತದ ವೈಶಿಷ್ಟ್ಯ ನಾವು ಶಿವನ ಆರಾಧನೆ ಮಾಡಿ ಕೈಲಾಗದ ಹೇಡಿಯಂತೆ ಇರಬಾರದು ಎಂದರು.


ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ದೇವಸ್ಥಾನಗಳು ಧರ್ಮಜಾಗೃತಿಯ ಕೆಲಸ ಮಾಡಬೇಕು. ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶಿಲೆಶಿಲೆ ಮೊಕ್ತೇಸರರಾದ ರಾಘವೇಂದ್ರ ಶಾಸ್ತ್ರಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯತನವನ್ನು ತುಂಬಿಸುವ ಕೆಲಸ ಮಾಡಬೇಕು ಎಂದರು.


ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಟೀಮ್ ದಕ್ಷಿಣಕಾಶಿಯ ರವಿ ಇಳಂತಿಲ, ಮುಖಂಡರಾದ ದಯಾನಂದ ಶೆಟ್ಟಿ ಉಜಿರೆಮಾರು, ಬೆಂಗಳೂರಿನ ಉದ್ಯಮಿಗಳಾಸ ಡಾ.ನವೀನ್ ಹಾಗೂ ಡಾ. ಶಿಲ್ಪಾ ನವೀನ್ ದಂಪತಿ, ಕೆ.ಪಿ.ರಘುರಾಮ ಶೆಟ್ಟಿ ಕನ್ಯಾನ, ಮಂಗಳೂರು ಉದ್ಯಮಿ ದಿವಾಣ ಗೋವಿಂದ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಅರುಣ ಶ್ಯಾಮ ಸ್ವಾಗತಿಸಿದರು. ಕಾರ್ಯದರ್ಶಿ ಕೃಷ್ಣ ಎಂ.ಆರ್ ನಿರ್ವಹಿಸಿದರು. ಕಾರ್ಯಕ್ರಮವನ್ನು ನಿತೇಶ್ ಮತ್ತು ವಿಖ್ಯಾತ್ ನಿರ್ವಹಿಸಿದರು

LEAVE A REPLY

Please enter your comment!
Please enter your name here