






ಈಶ್ವರಮಂಗಲ ಶ್ರೀ ಕ್ಷೇತ್ರ ಹನುಮಗಿರಿ ಶ್ರೀ ಕೋಡರಾಮ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಕೋಟಿ ರಾಮ ತಾರಕನಾಮ ಯಜ್ಞ ಪೂರ್ಣಾಹುತಿಗೊಂಡಿತು, ಕಾಂಚೀ ಕಾಮಕೋಟಿ ಮಠದ ಸ್ವಾಮೀಜಿ ಸೇರಿದಂತೆ ಮೂವರು ಯತಿಗಳು ಭಾಗವಹಿಸಿದರು.


ಈಶ್ವರಮಂಗಲ: ಶ್ರೀ ಕ್ಷೇತ್ರ ಹನುಮಗಿರಿ ಶ್ರೀ ಕೋದಂರಾಮ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಕೋಟಿ ರಾಮ ತಾರಕನಾಮ ಯಜ್ಞದ ಪೂರ್ಣಾಹುತಿ ನಡೆಯಿತು. ಕಾಂಚಿಪುರಂನ ಶ್ರೀ ಕಾಂಚೀ ಕಾಮಕೋಟಿ ಮಠದ ಪೀಠಾಧಿಪತಿ ಜಗದ್ಗುರು ಶಂಕರಾಚಾರ್ಯ ಸ್ವಾಮೀಜಿ, ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹಾಗೂ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸಮ್ಮುಖದಲ್ಲಿ ಯಜ್ಞದ ಪೂರ್ಣಾಹುತಿ ಅತ್ಯಂತ ಭಕ್ತಿಭಾವದಿಂದ ನಡೆಯಿತು.



ಯಜ್ಞದ ಸನ್ನಿವೇಶದಲ್ಲಿ ವಿಶೇಷ ಪೂಜೆ, ರಾಮನಾಮ ಜಪ, ಹೋಮ-ಹವನಾದಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಕ್ಷೇತ್ರದ ವಾತಾವರಣ ಸಂಪೂರ್ಣ ಆಧ್ಯಾತ್ಮಿಕತೆಯಿಂದ ತುಂಬಿದೆ.
ಈ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಸಾವಿರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿದರು.










