ಪಿಯುಸಿ ಪರೀಕ್ಷೆ: ರಾಜ್ಯಕ್ಕೆ 10ನೇ ಸ್ಥಾನ ಗಳಿಸಿದ, ವಿಜ್ಞಾನ ವಿಷಯದಲ್ಲಿ ತಾಲೂಕಿಗೇ ಅತ್ಯಧಿಕ ಅಂಕ ಗಳಿಸಿದ ಸುದಾನ ಕಾಲೇಜಿನ ಸ್ವಸ್ತಿ ಶೆಟ್ಟಿರವರಿಗೆ ಸನ್ಮಾನ

0

ಪುತ್ತೂರು:ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸುದಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ  ಸ್ವಸ್ತಿ ಶೆಟ್ಟಿಯವರು  590 ಅಂಕ ಗಳಿಸುವ ಜೊತೆಗೆ ಪಿಸಿಎಂಬಿ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ 10ನೇ ಸ್ಥಾನ ಗಳಿಸಿದ್ದಾರೆ. 

ಅವರನ್ನು ಸುದಾನ ಕಾಲೇಜಿನ  ಆಡಳಿತ ಮಂಡಳಿಯ ಅಧ್ಯಕ್ಷರಾದ ರೆ. ವಿಜಯ್ ಹಾರ್ವಿನ್, ಸಂಚಾಲಕರಾದ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಖಜಾಂಚಿ ಆಸ್ಕರ್ ಆನಂದ್, ಕಾಲೇಜಿನ ಪ್ರಾಂಶುಪಾಲರಾದ ಸುಪ್ರೀತ್ ಕೆ ಸಿ  ಅವರು ಸನ್ಮಾನಿಸಿ ಶುಭ ಹಾರೈಸಿದರು. ಸ್ವಸ್ಥಿ ಶೆಟ್ಟಿರವರು ನೆಲ್ಲಿಕಟ್ಟೆ ನಿವಾಸಿ ಶ್ರೀಮತಿ ಪೂನಂ ಶೆಟ್ಟಿ ಹಾಗೂ ಶ್ರೀ ನಿಖಿಲ್ ಶೆಟ್ಟಿ ಅವರ ಸುಪುತ್ರಿ.

LEAVE A REPLY

Please enter your comment!
Please enter your name here