ಏ.17ರಿಂದ 19: ನೆಲ್ಯಾಡಿ ಕೋಲ್ಪೆ ಮಖಾಂ ಉರೂಸ್

0

ನೆಲ್ಯಾಡಿ: ಬದ್ರಿಯಾ ಜುಮ್ಮಾ ಮಸೀದಿ ಸಯ್ಯದ್ ಮಲ್ಹರ್ ವಲಿಯುಲ್ಲಾಹಿ(ಖ.ಸಿ.) ದರ್ಗಾ ಶರೀಫ್ ಕೋಲ್ಪೆ-ನೆಲ್ಯಾಡಿ ಇಲ್ಲಿ ನಡೆಯುವ ’ಕೋಲ್ಪೆ ಮಖಾಂ ಉರೂಸ್ 2026’ ಏ.17ರಿಂದ 19ರ ತನಕ ರಾತ್ರಿ ಗಂಟೆ ೭ಕ್ಕೆ ಕೋಲ್ಪೆ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕೋಲ್ಪೆ ಬಿಜೆಎಂ ಅಧ್ಯಕ್ಷರಾದ ಅಬ್ದುಲ್ ಶುಕೂರು ಕೆ.ಜಿ.ಎನ್., ಪ್ರಧಾನ ಕಾರ್ಯದರ್ಶಿ ಶಮೀರ್ ಅರ್ಶದಿ ಹಾಗೂ ಉಪಾಧ್ಯಕ್ಷರು, ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ.17ರಂದು ರಾತ್ರಿ ಗೋಳಿತ್ತೊಟ್ಟು ಬಿಜೆಎಂ ಖತೀಬ್ ಇಸ್ಹಾಕ್ ಫೈಝಿ ಉದ್ಘಾಟಿಸಲಿದ್ದಾರೆ. ಕೋಲ್ಪೆ ಬಿಜೆಎಂ ಗೌರವಾಧ್ಯಕ್ಷ ಬಿ.ಎಸ್.ಬಾವಾ ತಂಙಳ್ ದುವಾ: ನೆರವೇರಿಸಲಿದ್ದು ಕಕ್ಕಿಂಜೆ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕೋಲ್ಪೆ ಬಿಜೆಎಂ ಉಪಾಧ್ಯಕ್ಷ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಲಿದ್ದಾರೆ.

ಏ.18ರಂದು ಕೋಲ್ಪೆ ಬಿಜೆಎಂ ಖತೀಬ್ ಇಸ್ಹಾಕ್ ಫೈಝಿ ದುವಾ: ನೆರವೇರಿಸಲಿದ್ದಾರೆ. ಕೋಲ್ಪೆ ನೂರಾನಿಯ ಮದರಸದ ಸದರ್ ಉಸ್ತಾದ್ ಅಬ್ದುಲ್ ಜಬ್ಬಾರ್ ಅಸ್ಲಮಿ ಉದ್ಘಾಟಿಸಲಿದ್ದು, ಉದ್ಯಾವರ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಅಶ್ರಫ್ ಫೈಝಿ ಕೊಡಗು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕೋಲ್ಪೆ ಬಿಜೆಎಂ ಉಪಾಧ್ಯಕ್ಷ ಎಸ್.ಕೆ.ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಲಿದ್ದಾರೆ.

ಏ.19; ಸಮಾರೋಪ
ಏ.19ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದೆ. ಅಸ್ಸಯ್ಯದ್ ಇಬ್ರಾಹಿಂ ಬಾದುಷಾ ತಂಙಳ್ ಅಝ್‌ಹರಿ ಅಲ್ ಮುರ್ಶಿದಿ ಅಣೆಕ್ಕಲ್ ದು:ಆ ಆಶೀರ್ವಚನ ನೀಡಲಿದ್ದಾರೆ. ಕೋಲ್ಪೆ ಬಿಜೆಎಂ ಅಧ್ಯಕ್ಷ ಅಬ್ದುಲ್ ಶುಕೂರು ಕೆ.ಜಿ.ಎನ್.ಅಧ್ಯಕ್ಷತೆ ವಹಿಸಲಿದ್ದಾರೆ. ಗೋಳಿತ್ತೊಟ್ಟು ಆರ್‌ಜೆಜೆಎಂ ಖತೀಬ್ ಶಾಕಿರ್ ನಿಝಾಮಿ ಉದ್ಘಾಟಿಸಲಿದ್ದಾರೆ. ಕೋಲ್ಪೆ ಬಿಜೆಎಂ ಖತೀಬ್ ಇಸ್ಹಾಕ್ ಫೈಝಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ, ಮಾಜಿ ಸಚಿವ ಬಿ.ರಮಾನಾಥ ರೈ, ರಾಜ್ಯ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ ಚೆಯರ್‌ಮ್ಯಾನ್ ಯು.ಟಿ.ಇಫ್ತಿಕಾರ್ ಅಲ್ ಫರೀದ್, ಕೆಪಿಸಿಸಿ ಸದಸ್ಯ ಪದ್ಮರಾಜ್ ಪೂಜಾರಿ, ಮಾಜಿ ಶಾಸಕ ಮೊಯ್ದಿನ್ ಬಾವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ವಿಧಾನಪರಿಷತ್ ಸದಸ್ಯ ಐವನ್ ಡಿ.ಸೋಜ, ಟಿ.ಎಂ.ಶಾಹಿದ್ ತೆಕ್ಕಿಲ್, ಕೆಪಿಸಿಸಿ ಸದಸ್ಯ ಕೃಷ್ಣಪ್ಪ ಜಿ., ಕಾಶಿಪಟ್ಣ ದಾರುನ್ನೂರು ಎಜುಕೇಶನ್ ಸೆಂಟರ್ ಅಧ್ಯಕ್ಷ ಬಿ.ಎಂ.ಶರೀಫ್ ವೈಟ್ ಸ್ಟೋನ್, ಸೌದಿ ಅರೇಬಿಯ ಪ್ಲಾಂಟ್ ಸೊಲ್ಯೂಶನ್ಸ್‌ನ ಅಬ್ದುಲ್ ಹಮೀದ್ ಅಸ್ಕಾಫ್, ಶಾಹುಲ್ ಹಮೀದ್(ಅಮ್ಮಿ)ಕಡಬಕ್ಕಾರ್, ಸೌದಿ ಅರೇಬಿಯಾ ಇಂಜಿನಿಯರ್ ಸೂಫಿ ಇಬ್ರಾಹಿಂ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here