







ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಎ.15ರಂದು ಬನ್ನೂರು ಅಶೋಕನಗರ, ರೈಲ್ವೇ ಮಾರ್ಗ ಸವಾರಿಯ ವೇಳೆ ರಾತ್ರಿ ಕಬಕ ಪುತ್ತೂರು ರೈಲು ನಿಲ್ದಾಣದ ಪ್ಲ್ಯಾಟ್‌ಫಾರ್ಮ್‌ನ ಒಳಗಿನಿಂದ ಸವಾರಿ ಹೋಗುವುದು ವಿಶೇಷ.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಜಾತ್ರೆಯ ಸಂದರ್ಭ ಪೇಟೆ ಸವಾರಿಯ ವೇಳೆ ಎರಡು ಬಾರಿ ರೈಲ್ವೇ ಹಳಿಯನ್ನು ದಾಟಿ ಸಾಗುತ್ತಾರೆ. ಎ.15ರಂದು ಬನ್ನೂರು ಅಶೋಕನಗರ ಆಗಿ ರೈಲ್ವೇ ಮಾರ್ಗದ ಮೂಲಕ ರೈಲ್ವೇ ಹಳಿಯನ್ನು ದಾಟಿ ರೈಲ್ವೇ ಪ್ಲ್ಯಾಟ್‌ಫಾರ್ಮ್ ಒಳಗಿನಿಂದಲೇ ಬಂದು ರೈಲ್ವೇ ನಿಲ್ದಾಣದ ಎದುರು ಇರುವ ಕಟ್ಟೆಯಲ್ಲಿ ಪೂಜೆ ಸ್ವೀಕಾರ ಮಾಡುತ್ತಾರೆ. ರೈಲ್ವೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಶ್ರೀ ದೇವರ ಸವಾರಿ ನೋಡಲು ಬಲು ಚಂದವಾಗಿದ್ದು ಫೃಥ್ವಿ ಚಡಗ ಅವರು ತಮ್ಮ ಕ್ಯಾಮರದಲ್ಲಿ ಈ ಚಿತ್ರವನ್ನು ಸೆರೆ ಹಿಡಿದಿದ್ದಾರೆ.













